ಒಂದೇ ಬಾರಿಗೆ ಮುಂಬೈನಲ್ಲಿ ಧೋನಿ ಖರೀದಿ ಮಾಡಿದ ಫ್ಲ್ಯಾಟ್ ಗಳೆಷ್ಟು ಗೊತ್ತೇ?!
ಗುರುವಾರ, 12 ಜನವರಿ 2017 (09:19 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಮುಂಬೈ ಮೈದಾನದಲ್ಲಿ ಕೊನೆಯ ಬಾರಿಗೆ ನಾಯಕನಾಗಿ ಆಡಿದ್ದ ಧೋನಿ ಈಗ ಹೊಸ ದಾಖಲೆ ಮಾಡಿದ್ದಾರೆ. ಅದು ಕ್ರಿಕೆಟಿಗ ಸಂಬಂಧಿಸಿಯಲ್ಲ. ಒಂದೇ ಬಾರಿಗೆ ಅವರು ಮುಂಬೈಯಲ್ಲಿ ಒಟ್ಟು ನಾಲ್ಕು ಫ್ಲ್ಯಾಟ್ ಗಳ ಒಡೆಯರಾಗಿದ್ದಾರಂತೆ!
ಕೆಲವು ಮೂಲಗಳನ್ನು ನಂಬುವುದಾದರೆ ಪಂದ್ಯ ಮುಗಿದ ಬಳಿಕೆ ಧೋನಿ ನಾಲ್ಕು ಫ್ಲ್ಯಾಟ್ ಖರೀದಿ ಡೀಲ್ ಮುಗಿಸಿದ್ದಾರೆ. ಅದೂ ಪ್ರತಿಷ್ಠಿತ ಅಂಧೇರಿಯ ಹೌಸಿಂಗ್ ಸೊಸೈಟಿಯಲ್ಲಿ. ಇಲ್ಲೇ ಪ್ರಭುದೇವ, ಪ್ರಚಿ ದೇಸಾಯಿ ಮುಂತಾದ ಬಾಲಿವುಡ್ ನಟ ನಟಿಯರ ಮನೆಗಳೂ ಇವೆ.
ಅಂತೂ ನಿವೃತ್ತಿಯ ನಂತರ ಮಾಡಲು ಕೆಲಸ ಬೇಕಲ್ಲಾ? ಅದಕ್ಕಾಗಿ ಧೋನಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಇಲ್ಲಿನ ಜಿಮ್ನಾಷಿಯಂನಲ್ಲಿ ಧೋನಿ ಹೆಚ್ಚು ಸಮಯ ಕಳೆಯುತ್ತಾರಂತೆ. ಅದಕ್ಕೇ ಕೆಲವು ಸ್ಥಳೀಯ ಬ್ರೋಕರ್ ಗಳನ್ನು ಈ ಪ್ರದೇಶವನ್ನು ಧೋನಿ-ವಾಲಿ ಎಂದೇ ಕರೆಯುತ್ತಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ