Photo Courtesy: CSK Twitter
ಅಭ್ಯಾಸದ ನಡುವೆ ಸುರೇಶ್ ರೈನಾ ನಾಯಕ ಧೋನಿಯೊಂದಿಗಿನ ವಿಶೇಷ ಕ್ಷಣವೊಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ರೈನಾ ಬಯೋಗ್ರಫಿ ‘ಬಿಲೀವ್’ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿತ್ತು. ಈ ಪುಸ್ತಕದ ಪ್ರತಿಯೊಂದನ್ನು ರೈನಾ ಧೋನಿಗೆ ನೀಡಿದ್ದು, ಇದನ್ನು ಧೋನಿ ಓದುತ್ತಿರುವ ಫೋಟೋವನ್ನು ರೈನಾ ಪ್ರಕಟಿಸಿದ್ದಾರೆ. ‘ನನ್ನ ಕತೆಗೆ ತಲಾ ಸ್ಪರ್ಶ’ ಎಂದು ರೈನಾ ಬರೆದುಕೊಂಡಿದ್ದಾರೆ.