ಸಿಎಸ್ ಕೆ ಪರ ಹೇಝಲ್ ವುಡ್ ಆಡುವುದು ಕನ್ ಫರ್ಮ್

ಭಾನುವಾರ, 22 ಆಗಸ್ಟ್ 2021 (10:21 IST)
ದುಬೈ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಉಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಬೌಲರ್ ಹೇಝಲ್ ವುಡ್ ಆಡುವುದು ಖಚಿತವಾಗಿದೆ.


ಹೇಝಲ್ ವುಡ್ ಐಪಿಎಲ್ 14 ರ ಮೊದಲ ಭಾಗದಲ್ಲಿ ಆಡಿರಲಿಲ್ಲ. ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಆದರೆ ಈಗ ಎರಡನೇ ಭಾಗದಲ್ಲಿ ಅವರಿರುತ್ತಾರೆ ಎಂದು ಚೆನ್ನೈ ತಂಡ ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಐಪಿಎಲ್ 14 ರ ಪಂದ್ಯಗಳಿಗೆ ಈಗಾಗಲೇ ಚೆನ್ನೈ ತಂಡ ಯುಎಇಗೆ ತೆರಳಿದ್ದು, ಅಭ್ಯಾಸವನ್ನೂ ಆರಂಭಿಸಿದ್ದಾರೆ. ಹೇಝಲ್ ವುಡ್ ಕೂಡಾ ಇಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ