ಅತೀ ಹೆಚ್ಚು ಗೆಲುವು ಕಂಡ ದ್ವಿತೀಯ ನಾಯಕ ಧೋನಿ

ಮಂಗಳವಾರ, 18 ಅಕ್ಟೋಬರ್ 2016 (10:04 IST)
ನವದೆಹಲಿ: ಟೀಂ ಇಂಡಿಯಾದ ಸೀಮಿತ ಓವರ್ ಪಂದ್ಯಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ಬರೆದಿದ್ದಾರೆ.

ಭಾನುವಾರ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ ಗೆಲ್ಲುವುದರೊಂದಿಗೆ ನಾಯಕರಾಗಿ ಅತೀ ಹೆಚ್ಚು ಏಕದಿನ ಪಂದ್ಯ ಗೆದ್ದನಾಯಕರ ಪೈಕಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ನಂತರದ ಸ್ಥಾನ ಧೋನಿಯದ್ದು. ಮಾಹಿ ಇದುವರೆಗೆ ತಮ್ಮ ನಾಯಕತ್ವದಲ್ಲಿ ಒಟ್ಟಾರೆ 108 ಗೆಲುವು ಪಡೆದಿದ್ದಾರೆ. ಬಾರ್ಡರ್ 107 ಬಾರಿ ಗೆಲುವು ದಾಖಲಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ