ದ್ವಿತೀಯ ಟಿ20 ಪಂದ್ಯವನ್ನು ಧೋನಿ ಅರ್ಧದಲ್ಲಿ ನಿಲ್ಲಿಸಿದ್ದು ಯಾಕೆ?

ಬುಧವಾರ, 1 ಫೆಬ್ರವರಿ 2017 (08:45 IST)
ಕಾನ್ಪುರ: ಭಾನುವಾರ ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಇಂತಹದ್ದೊಂದು ಘಟನೆ ನಡೆದಿತ್ತು. ಪಂದ್ಯ ನಡೆಯುತ್ತಿರುವಾಗ ಧೋನಿ ಅರ್ಧಕ್ಕೇ ಆಟ ನಿಲ್ಲಿಸಿದ್ದರು. ಯಾಕೆ?

 
ಇದು ಆಗಿದ್ದು ಇಂಗ್ಲೆಂಡ್ ಬ್ಯಾಟಿಂಗ್ ಮಾಡುತ್ತಿದ್ದಾಗ. ಎಂಟನೇ ಓವರ್ ನಲ್ಲಿ ಇಂಗ್ಲೆಂಡ್ 45 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು ಆಡುತ್ತಿತ್ತು. ಈ ವೇಳೆ ವಿಕೆಟ್ ಕೀಪರ್ ಧೋನಿ ಅರ್ಧಕ್ಕೆ ಪಂದ್ಯ ನಿಲ್ಲಿಸಿದರು.

ಕಾರಣ ವಿಕೆಟ್ ಮೇಲಿರಿಸಿದ್ದ ಒಂದು ಎಲ್ ಇಡಿ ಸ್ಟಂಪ್ ಕೆಲಸ ಮಾಡುತ್ತಿರಲಿಲ್ಲ. ಇದನ್ನು ವಿಕೆಟ್ ಹಿಂದುಗಡೆಯಿದ್ದ ಧೋನಿ ಗಮನಿಸಿದ್ದರು. ಸಾಮಾನ್ಯವಾಗಿ ವಿಕೆಟ್ ಗೆ ಚೆಂಡು ಬಡಿದರೆ ಸ್ಟಂಪ್ ನಲ್ಲಿರುವ ಎಲ್ ಇಡಿ ಬಲ್ಬ್ ಬೆಳಗುತ್ತದೆ. ಇದು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲವಾದ್ದರಿಂದ ತಪ್ಪು ನಿರ್ಣಯಗಳಾಗುವ ಸಾಧ್ಯತೆಯಿತ್ತು.

ತಕ್ಷಣ ಅಂಪಾಯರ್ ಗಳನ್ನು ಕರೆದು ಧೋನಿ ಪರಿಸ್ಥಿತಿ ವಿವರಿಸಿದರು. ಅಲ್ಲದೆ ಹೊಸ ಸ್ಟಂಪ್ ಅಳವಡಿಸಲು ಕಾರಣರಾದರು. ನಂತರ ಆಟ ನಿರಾತಂಕವಾಗಿ ಸಾಗಿತು. ವಿಕೆಟ್ ಹಿಂದುಗಡೆ ಇದ್ದುಕೊಂಡು ಬ್ಯಾಟ್ಸ್ ಮನ್ ಗಳ ಚಲನವಲನಗಳನ್ನು ಕರೆಕ್ಟ್ ಆಗಿ ಊಹಿಸುವ ಧೋನಿ ಈ ವಿಚಾರದಲ್ಲಿ ಮತ್ತೊಮ್ಮೆ ಸೂಕ್ಷ್ಮ ಮತಿ ಎಂದು ಸಾಬೀತು ಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ