ಚೆನ್ನೈ: ಐಪಿಎಲ್ 2019 ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಕ್ರಿಕೆಟಿಗರೆಲ್ಲಾ ತಮ್ಮ ಫ‍್ರಾಂಚೈಸಿಗಳನ್ನು ಸೇರಿಕೊಂಡಿದ್ದು, ಜಾಹೀರಾತುಗಳ ಮೂಲಕ ಸವಾಲಿಗೆ ಪ್ರತಿ ಸವಾಲು ಹಾಕುತ್ತಿದ್ದಾರೆ.
ಮಾರ್ಚ್ 23 ರಂದು ಮೊದಲ ಪಂದ್ಯದಲ್ಲಿಯೇ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಮಹತ್ವದ ಹಣಾಹಣಿಗೆ ಮೊದಲು ಧೋನಿ, ಆರ್ ಸಿಬಿ ನಾಯಕ ಕೊಹ್ಲಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಐಪಿಎಲ್ ಟೀಸರ್ ನಲ್ಲಿ ಧೋನಿ ಕೊಹ್ಲಿಗೆ ‘ಲೇಟ್ ಆಗಿ ಬರಬೇಡ’ ಎಂದು ವಾರ್ನಿಂಗ್ ಕೊಡುವ ವಿಡಿಯೋ ಈಗ ವೈರಲ್ ಆಗಿದೆ. ಈ ಎಕ್ಸೈಟಿಂಗ್ ಪಂದ್ಯದಲ್ಲಿ ಭಾರತದ ಎರಡು ಸೂಪರ್ ಸ್ಟಾರ್ ಗಳು ಎದುರಾಗಲಿದ್ದು, ಅಭಿಮಾನಿಗಳೂ ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ