ಇನ್ನು ಮುಂದೆ ಧೋನಿ ಕೂದಲು ಉದ್ದ ಬೆಳೆಯೋಲ್ವಂತೆ
ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗುವ ಮೊದಲು ಕೂದಲು ಬಿಟ್ಟುಕೊಂಡಿದ್ದ ಧೋನಿ ನಂತರ ಕತ್ತರಿ ಹಾಕಿದ್ದರು. ಇದೀಗ ಹೇಗೂ ನಾಯಕತ್ವವಿಲ್ಲ. ಅದನ್ನು ಮೊದಲಿನಂತೆ ಮಾಡಲಾಗದು ಎಂದು ಧೋನಿ ಖಡಾಖಂಡಿತವಾಗಿ ಪತ್ರಕರ್ತರಿಗೆ ಹೇಳಿದ್ದಾರೆ.
“2007 ರ ನಂತರ ನನ್ನಲ್ಲಿ ಹಲವು ಬದಲಾವಣೆಗಳಾದವು. ಈಗ ನಾಯಕತ್ವ ತ್ಯಜಿಸಿದ್ದೇನೆ. ಮುಂದೆ ತಂಡಕ್ಕೆ ಬೇಕಾದಂತೆ ಬ್ಯಾಟಿಂಗ್ ಶೈಲಿ ಬದಲಾಯಿಸಿಕೊಳ್ಳುತ್ತೇನೆ. ಆದರೆ ಕೂದಲು ಉದ್ದ ಬೆಳೆಸೋದಿಲ್ಲ” ಎಂದಿದ್ದಾರೆ ಧೋನಿ.