Virat Kohli: ಮಾರ್ಚ್ 17 ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಂದ ಕೊಹ್ಲಿಗೆ ಸರ್ಪ್ರೈಸ್

Krishnaveni K

ಮಂಗಳವಾರ, 13 ಮೇ 2025 (20:27 IST)
ಬೆಂಗಳೂರು: ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿಗೆ ಆರ್ ಸಿಬಿ ಫ್ಯಾನ್ಸ್ ಮಾರ್ಚ್ 17 ರಂದು ಚಿನ್ನಸ್ವಾಮಿ ಮೈದಾನದಲ್ಲಿ ಸರ್ಪೈಸ್ ಕೊಡಲು ತೀರ್ಮಾನಿಸಿದ್ದಾರೆ.

ಮಾರ್ಚ್ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಕೆಆರ್ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಆರ್ ಸಿಬಿ ಅಭಿಮಾನಿಗಳು ಕೊಹ್ಲಿಗಾಗಿ ಈ ಪಂದ್ಯಕ್ಕೆ ವಿಶೇಷ ದಿರಿಸಿನಲ್ಲಿ ಆಗಮಿಸಲಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ಆಕ್ರಮಣಕಾರೀ ಸ್ಪರ್ಶ ನೀಡಿದವರು. ಭಾರತ ಯಶಸ್ವೀ ಟೆಸ್ಟ್ ನಾಯಕ. ಹೀಗಾಗಿ ಈ ಮಾದರಿಯಿಂದ ನಿವೃತ್ತಿಯಾಗಿರುವ ಕೊಹ್ಲಿಗಾಗಿ ಅಭಿಮಾನಿಗಳು ಅಂದು ಬಿಳಿ ಬಣ್ಣದ ಟೆಸ್ಟ್ ಜೆರ್ಸಿಯಲ್ಲೇ ಮೈದಾನಕ್ಕೆ ಆಗಮಿಸಲಿದ್ದಾರೆ.

ಕೊಹ್ಲಿ ವಿದಾಯ ಪಂದ್ಯವನ್ನಂತೂ ಆಡಿಲ್ಲ. ಹೀಗಾಗಿ ಅಭಿಮಾನಿಗಳು ಅವರಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಹೀಗಾಗಿ ಮಾರ್ಚ್ 17 ರ ಪಂದ್ಯದ ವೇಳೆ ಆರ್ ಸಿಬಿ ಜೆರ್ಸಿಗಿಂತ ಬಿಳಿ ಜೆರ್ಸಿಯೇ ಹೆಚ್ಚು ಕಂಡರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ