ಡಬ್ಲ್ಯುಟಿಸಿ ಫೈನಲ್ ನಲ್ಲಿ ಗಾಯವಿದ್ದರೂ ಶುಬ್ನಂ ಗಿಲ್ ಗೆ ಅವಕಾಶ ಕೊಡಲಾಗಿತ್ತೇ?!
ಇದೀಗ ಅವರ ಗಾಯ ಮತ್ತಷ್ಟು ಗಂಭೀರವಾಗಿದ್ದು ಎಂಟು ವಾರಗಳಿಗೆ ವಿಶ್ರಾಂತಿ ಪಡೆಯಬೇಕಾಗಿದೆ. ಒಂದು ವೇಳೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೂ ಮೊದಲೇ ಗಾಯವಾಗಿದ್ದರೆ, ಅವರನ್ನು ಆಡಿಸಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಟೀಂ ಇಂಡಿಯಾದ ಇಂತಹ ನಿರ್ಧಾರದಿಂದ ಗಿಲ್ ಮತ್ತಷ್ಟು ಅಪಾಯಕ್ಕೀಡಾಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.