ನಿಮಗಿದು ಗೊತ್ತೇ? ಧೋನಿ ಸಿನಿಮಾದಲ್ಲೂ ನಟಿಸಿದ್ದರಂತೆ!

ಗುರುವಾರ, 12 ಜನವರಿ 2017 (09:44 IST)
ರಾಂಚಿ: ರಾಂಚಿ ವೀರ ಧೋನಿ ಕ್ರಿಕೆಟಿಗ, ಬ್ಯುಸಿನೆಸ್ ನಲ್ಲೂ ಕೈಯಾಡಿಸಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ಅವರು ಒಂದು ಸಿನಿಮಾದಲ್ಲೂ ನಟಿಸಿದ್ದರಂತೆ. ಯಾವ ಸಿನಿಮಾ, ಯಾವಾಗ ಎಂಬ ಕುತೂಹಲವೇ? ಈ ಸ್ಟೋರಿ ಓದಿ.

2010 ರಲ್ಲಿ ಹುಕ್ ಯಾ ಕ್ರೂಕ್ ಎನ್ನುವ ಬಾಲಿವುಡ್ ಸಿನಿಮಾ ಬಂದಿತ್ತು. ಇದರಲ್ಲಿ ಜಾನ್ ಅಬ್ರಹಾಂ, ಜೆನಿಲಿಯಾ ಡಿಸೋಜಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಧೋನಿ ಒಂದು ಪಾತ್ರ ಮಾಡಿದ್ದರಂತೆ. ಇದನ್ನು ಸಿನಿಮಾ ವೆಬ್ ಚಾನೆಲ್ ಐಎಂಬಿಡಿ ಹೇಳಿಕೊಂಡಿದೆ. ಇದರಲ್ಲಿ ಧೋನಿ ಮತ್ತು ಸುಶಾಂತ್ ಸಿಂಗ್ ರಜಪೂತ್ ನಡುವೆ ನಡೆಯುವ ಚಿಟ್ ಚಾಟ್ ವಿಡಿಯೋದಲ್ಲಿ ಧೋನಿ ಈ ವಿಷಯ ಬಹಿರಂಗಪಡಿಸಿದ್ದಾರಂತೆ.

ಹೀಗಾಗಿ ತಮ್ಮದೇ ಬಯೋಗ್ರಫಿ ಸಿನಿಮಾ ಧೋನಿ ದಿ ಅನ್ ಟೋಲ್ಡ್ ಸ್ಟೋರಿಗಿಂತ ಮೊದಲು ಕೂಲ್ ಕ್ಯಾಪ್ಟನ್ ಸಿನಿಮಾದಲ್ಲಿ ನಟಿಸಿದ್ದರು ಎಂಬ ಸಂಗತಿ ಬಹಿರಂಗವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ