ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

Sampriya

ಭಾನುವಾರ, 17 ಆಗಸ್ಟ್ 2025 (16:25 IST)
Photo Credit X
ಹೈದರಾಬಾದ್: ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಆಗಸ್ಟ್ 13, 2025 ರಂದು ಮುಂಬೈನಲ್ಲಿ ಖಾಸಗಿ ಸಮಾರಂಭದಲ್ಲಿ ಸಾನಿಯಾ ಚಾಂಧೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಸಮಾರಂಭದಲ್ಲಿ ನಿಕಟ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು. ಕುಟುಂಬದವರು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ, ಈ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಕ್ರಿಯೇಟ್ ಮಾಡಿದೆ.

ಸಚಿನ್ ಅವರು ತನಗಿಂತ ಐದು ವರ್ಷ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಅಂಜಲಿಯನ್ನು ಮದುವೆಯಾಗಿದ್ದರು. ಇದೀಗ ಅಪ್ಪನಂತೆ ಮಗ ಕೂಡಾ ತನಗಿಂತ ಒಂದು ವರ್ಷ ದೊಡ್ಡವರಾಗಿರುವ ಸಾನಿಯಾ ಜತೆ ಎಂಗೇಜ್‌ ಆಗಿದ್ದಾರೆ. 

ಅರ್ಜುನ್ ಜನಿಸಿದ್ದು ಸೆಪ್ಟೆಂಬರ್ 24, 1999, ಮತ್ತು ಅವರಿಗೆ 25 ವರ್ಷ. ಅವರ ನಿಶ್ಚಿತ ವಧು ಸಾನಿಯಾ ಚಾಂಧೋಕ್, ಜೂನ್ 23, 1998 ರಂದು ಜನಿಸಿದರು. ಆಕೆಗೆ ಇದೀಗ 26 ವರ್ಷ.  ಸಾನಿಯಾ ಅರ್ಜುನ್‌ಗಿಂತ ಸ್ವಲ್ಪ ದೊಡ್ಡವರಾಗಿದ್ದು, ಇದೀಗ ಅಪ್ಪನ ಹಾದಿಯಲ್ಲೇ ಮಗ ಅರ್ಜುನ್ ನಡೆದಿದ್ದಾನೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ