ಟೀಂ ಇಂಡಿಯ ಆಟಗಾರರ ಪತ್ನಿಯರ ಎಜುಕೇಷನ್ ಸಿಕ್ರೇಟ್ ಇಲ್ಲಿದೆ ನೋಡಿ

ಶನಿವಾರ, 30 ಡಿಸೆಂಬರ್ 2017 (14:45 IST)
ಮುಂಬೈ: ಮೈದಾನದಲ್ಲಿ ಎದುರಾಳಿ ತಂಡದೊಂದಿಗೆ ಹೋರಾಡಿ ಕ್ರಿಕೆಟಿಗರು ಸ್ಟಾರ್ ಆದ್ರೆ ಅವರ  ಪತ್ನಿಯರು ಈ ಒಂದು ವಿಷಯದಲ್ಲಿ ಗ್ರೇಟ್ ಅನಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಕ್ರಿಕೆಟಿಗರಿಗಿಂತ ಅವರ  ಪತ್ನಿಯರೆ ಒಂದು ಕೈ ಮೇಲೆ ಇದ್ದಾರೆ.



ಅದೇನೆಂದರೆ ಕ್ರಿಕೆಟರ್ಸ್ ಮಡದಿಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯ ಆಟಗಾರರು ಎಂದಾಕ್ಷಣ ನೆನಪಾಗುವುದೇ ಸ್ಟಾರ್ ಪ್ಲೇಯರ್ಸಗಳು. ಇವರಿಗೆ ತುಂಬಾ ಅಭಿಮಾನಿಗಳ ಬಳಗವೆ ಇರುತ್ತದೆ. ಈ ಅಭಿಮಾನಿಗಳಿಗೆ ಪ್ಲೇಯರ್ಸಗಳ ಜೊತೆಗೆ ಅವರ ಮಡದಿಯರ ಬಗ್ಗೆ ತಿಳಿಯುವ ಕುತೂಹಲ ಇರುತ್ತದೆ. ಅವರ ಪತ್ನಿಯರು ಏನು ಓದಿದ್ದಾರೆ , ಅವರು ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಹಂಬಲ ಎಲ್ಲಾ ಅಭಿಮಾನಿಗಳಲ್ಲೂ ತರುತ್ತದೆ.



ಇತ್ತಿಚಿಗಷ್ಟೆ ಮದುವೆಯಾದ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು 12ನೇ ತರಗತಿ ತನಕ ಓದಿದರೆ ಅವರ ಪತ್ನಿ ಬಾಲಿವುಡ್ ನ ನಟಿ ಅನುಷ್ಕಾ ಶರ್ಮಾ ಅವರು ಅರ್ಥಶಾಸ್ತ್ರದಲ್ಲಿ ಪಧವಿಯನ್ನು ಪಡೆದಿದ್ದಾರೆ. ಹಾಗೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಅವರು ಸಹ ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಪಧವಿಯನ್ನು ಪಡೆದಿದ್ದಾರೆ. ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿಗೆ ಭೇಟಿ ನೀಡಿದ ಧೋನಿಯವರು ಸಾಕ್ಷಿ ಅವರನ್ನು ಕಂಡು ಮೆಚ್ಚಿಕೊಂಡರು. ನಂತರ ಅವರನ್ನೆ ಮದುವೆಯಾದರು.

 
ಇನ್ನು ಟೀಂ ಇಂಡಿಯಾದ ಮೊದಲ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು 12ನೇ ತರಗತಿಯವರೆಗೆ ಓದಿದ್ದಾರೆ ಆದರೆ ಅವರ ಪತ್ನಿ ರಿತಿಕಾ ಸ್ಪೋಟ್ಸ್ ಇವೆಂಟ್ ಮ್ಯಾನೇಜರ್. ಶಿಖರ್ ಧವನ್ ಅವರ ಪತ್ನಿ ಆಯುಷಾ ಮುಖರ್ಜಿ ಕೂಡ ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆದಿದ್ದಾರೆ. ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ ಸಿಂಗ್ ಅವರ ಪತ್ನಿ ಹೇಝಲ್ ಅವರು ಮಾಡ್ಲಿಂಗ್ ನಲ್ಲಿ ಡಿಗ್ರಿ ಮಾಡಿಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾದ ದೇವರೆನಿಸಿಕೊಂಡ ಸಚಿನ್ ತೆಂಡುಲ್ಕರ್ ಅವರು 12ನೇ ತರಗತಿಯವರೆಗೆ ಓದಿಕೊಂಡಿರೊದು ಆದರೆ ಅವರ ಪತ್ನಿ ಅಂಜಲಿ ತೆಂಡುಲ್ಕರ್ ವೈದ್ಯಕೀಯ ಪಧವಿಯನ್ನು ಪಡೆದಿದ್ದಾರೆ. ಹಾಗೆ ಸುರೇಶ ರೈನಾ ಪತ್ನಿ ಪ್ರಿಯಾಂಕ ಸಾಪ್ಟವೇರ್ ಇಂಜಿನಿಯರ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ