ಬಹುಪತ್ನಿತ್ವ ನಿಷೇಧಿಸಲು ಮುಸ್ಲಿಂ ಮಹಿಳೆಯರ ಒತ್ತಾಯ

ಶನಿವಾರ, 30 ಡಿಸೆಂಬರ್ 2017 (14:13 IST)
ತ್ರಿವಳಿ ತಲಾಖ್ ರದ್ದುಮಾಡಿದ ವಿಧೇಯಕಕ್ಕೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಬೆನ್ನಲ್ಲೆ ಮುಸ್ಲಿಂ ಸಮುದಾಯದ ಇನ್ನೊಂದು ಪಿಡುಗಾಗಿರುವ ಬಹುಪತ್ನಿತ್ವ (ಪಾಲಿಗಾಮಿ) ಪದ್ಧತಿಯನ್ನು ರದ್ದುಪಡಿಸಲು ಮುಸ್ಲಿಂ ಸಮುದಾಯದ ಮಹಿಳೆಯರು ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಒತ್ತಾಯಿಸಿದ್ದಾರೆ.
 
ತ್ರಿವಳಿ ತಲಾಖ್ ರದ್ದತಿಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತ ನಂತರ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ರದ್ದತಿ ಮಾದರಿಯಲ್ಲೇ ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಪದ್ಧತಿ ನಿಷೇಧಿಸಲು ಹೋರಾಟ ನಡೆಸಲು ಮುಂದಾಗಿದ್ದಾರೆ.
 
ಬಹುಪತ್ನಿತ್ವ ಪದ್ಧತಿ ತ್ರಿವಳಿ ತಲಾಖ್‍ನಂತೆಯೇ ಮುಸ್ಲಿಂ ಸಮುದಾಯದ ಅಸಂಖ್ಯಾತ ಮಹಿಳೆಯರ ಬದುಕನ್ನು ದುಸ್ತರಗೊಳಿಸಿದೆ. ಆದ್ದರಿಂದ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಈ ಪದ್ದತಿಯನ್ನು ಕೈಬಿಡಬೇಕು ಎಂದು ಧ್ವನಿಯೆತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ