ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಐಸಿಸಿ ಟೆಸ್ಟ್ ಬೌಲರುಗಳ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಮುಟ್ಟಿದ್ದಾರೆ. ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಜಯಗಳಿಸಿದ ಬಳಿಕ ಆಂಡರ್ಸನ್ ಈ ಸಾಧನೆ ಮಾಡಿದ್ದಾರೆ. ಆಂಡರ್ ಸನ್ ಅವರು 884 ಪಾಯಿಂಟ್ ಗಳಿಸಿದ್ದರೆ, ರವಿಚಂದ್ರನ್ ಅಶ್ವಿನ್ ಅವರು 789 ಪಾಯಿಂಟ್ಗಳೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ.
ಆಂಡರ್ಸನ್ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ನಾಲ್ಕನೇ ಇಂಗ್ಲೆಂಡ್ ಬೌಲರ್ ಆಗಿದ್ದು, 1980ರಲ್ಲಿ ಐಯಾನ್ ಬಾಥಮ್ ಈ ಸಾಧನೆಯನ್ನು ಮೊಟ್ಟಮೊದಲಿಗೆ ಮಾಡಿದ್ದರು. ಟೆಸ್ಟ್ನಲ್ಲಿ 5 ವಿಕೆಟ್ ಕಬಳಿಸಿದ ಬ್ರಾಡ್, ಅಶ್ವಿನ್ ಅವರ ಹಿಂದೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.