ಯಾರು ಕೋಚ್ ಹುದ್ದೆಗೆ ಅರ್ಜಿ ಹಾಕಿದ್ರೂ ನಂಗೇನು? ಗಂಗೂಲಿ ಪ್ರಶ್ನೆ

ಬುಧವಾರ, 28 ಜೂನ್ 2017 (09:52 IST)
ಮುಂಬೈ: ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ಆಯ್ಕೆ ಸಮಿತಿ ಸದಸ್ಯ ಸೌರವ್ ಗಂಗೂಲಿ ಎಲ್ಲರಿಗೂ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹತೆಯಿದೆ ಎಂದಿದ್ದಾರೆ.

 
ಕಳೆದ ಬಾರಿ ಅನಿಲ್ ಕುಂಬ್ಳೆಯನ್ನು ಕೋಚ್ ಆಗಿ ಆಯ್ಕೆ ಮಾಡಿ, ರವಿ ಶಾಸ್ತ್ರಿಯನ್ನು ಕಡೆಗಣಿಸಿದರೆಂದು ಗಂಗೂಲಿ ಮೇಲೆ ಬಹಿರಂಗವಾಗಿ ಶಾಸ್ತ್ರಿ ಟೀಕೆ ಮಾಡಿದ ಮೇಲೆ ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವುದು ಸಾಬೀತಾಗಿದೆ.

ಈ ಹಿನ್ನಲೆಯಲ್ಲಿ ಶಾಸ್ತ್ರಿ ಅರ್ಜಿ ಸಲ್ಲಿಸಿದ್ದರ ಬಗ್ಗೆ ಗಂಗೂಲಿಯನ್ನು ಪ್ರಶ್ನಿಸಿದಾಗ ಅವರು ಯಾರಿಗೆ ಬೇಕಾದ್ರೂ ಅರ್ಜಿ ಹಾಕುವ ಹಕ್ಕು ಇದೆ. ಇದರಿಂದ ನನಗೇನೂ ಇಲ್ಲ ಎಂದಿದ್ದಾರೆ. ಯಾರು ಅರ್ಹರು ಎನಿಸುತ್ತಾರೋ ಅವರನ್ನೇ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ ಕೋಚ್ ಆಯ್ಕೆ ಸಮಿತಿ ಸದಸ್ಯರಾಗಿರುವ ಗಂಗೂಲಿ.

ಇದೇ ವೇಳೆ ಕೊಹ್ಲಿ- ಕುಂಬ್ಳೆ ವಿವಾದವನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅದನ್ನು ಇನ್ನೂ ಚೆನ್ನಾಗಿ ಬಗೆಹರಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ