ಮುಂಬೈ: ಟೀಂ ಇಂಡಿಯಾದ ಒಂದು ಕಾಲದ ಪ್ರಮುಖ ಆಟಗಾರರು, ಸದ್ಯಕ್ಕೆ ತಂಡಕ್ಕೆ ಆಯ್ಕೆಯಾಗಲು ಹೆಣಗಾಡುತ್ತಿರುವವರೆಲ್ಲಾ ಒಂದೇ ಕಡೆ ಸೇರಲಿದ್ದಾರೆ. ಇವರೇನು ಗುಪ್ತ ಸಭೆ ಸೇರುತ್ತಾರಾ ಎಂದು ಅಂದುಕೊಳ್ಳಬೇಡಿ.
ಇವರೆಲ್ಲಾ ಸೇರುತ್ತಿರುವುದು ಡಿ ವೈ ಪಾಟೀಲ್ ಟಿ-ಟ್ವೆಂಟಿ ಪಂದ್ಯಕ್ಕೆ. ಜನವರಿ 4 ರಿಂದ 15 ರವರೆಗೆ ನೆರೂಲ್ ನಲ್ಲಿರುವ ಡಿ ವೈ ಪಾಟೀಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ಪಂದ್ಯಾವಳಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ ಮುಂತಾದ ಆಟಗಾರರು ಪಾಲ್ಗೊಳ್ಳಲಿದ್ದಾರೆ.
16 ತಂಡಗಳು ಕೂಟದಲ್ಲಿ ಭಾಗವಹಿಸುತ್ತಿದ್ದು, 31 ಪಂದ್ಯಗಳು ನಡೆಯಲಿವೆ. ಗೆದ್ದವರಿಗೆ ಬಹುಮಾನ ಮೊತ್ತವಾಗಿ 15 ಲಕ್ಷ ರೂ. ಸಿಗಲಿದೆ. ರಿಲಯನ್ಸ್, ಟಾಟಾ, ಕೆನರಾ ಬ್ಯಾಂಕ್ ಮುಂತಾದ ಕ್ಲಬ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಕಂಡುಕೊಳ್ಳಲು ಹೆಣಗಾಡುತ್ತಿರುವ ಸುರೇಶ್ ರೈನಾ, ಯುವರಾಜ್ ಸಿಂಗ್ ಕಿರು ಮಾದರಿಯ ಪಂದ್ಯದ ಮೂಲಕ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ