ಧೋನಿ ಕಾಲಿಗೆ ಬೀಳಲು ಮೈದಾನಕ್ಕೆ ಓಡಿ ಬಂದ ಅಭಿಮಾನಿ!

ಮಂಗಳವಾರ, 10 ಜನವರಿ 2017 (21:27 IST)
ಮುಂಬೈ: ನಮ್ಮ ದೇಶದಲ್ಲಿ ಕ್ರಿಕೆಟಿಗರೆಂದರೆ ಎಂತೆಂತಹಾ ಆರಾಧಕರಿದ್ದಾರೆಂದು ಮತ್ತೊಮ್ಮೆ ಪ್ರೂವ್ ಆಯ್ತು. ಮುಂಬೈಯಲ್ಲಿ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಧೋನಿ ಬ್ಯಾಟ್ ಬೀಸುತ್ತಿದ್ದರೆ, ಮಧ್ಯದಲ್ಲೇ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ಧೋನಿ ಕಾಲಿಗೆರಗಲು ಪ್ರಯತ್ನಸಿದ ಘಟನೆ ನಡೆದಿದೆ.


ಆತ ಸೆಕ್ಯುರಿಟಿ ಕಣ್ಣು ತಪ್ಪಿಸಿ ಕ್ರೀಸ್ ನಲ್ಲಿದ್ದ ಧೋನಿ ಬಳಿಗೆ ಓಡಿ ಬಂದಿದ್ದ. ಇದನ್ನು ಕಂಡ ಧೋನಿ ದಯವಿಟ್ಟು ಪಿಚ್ ಮೇಲೆ ಓಡಾಡಬೇಡಿ ಎಂದು ಮನವಿ ಮಾಡಿದರು. ಹೀಗಾಗಿ ಪಿಚ್ ಮೇಲೆ ಜಂಪ್ ಮಾಡಿ ತನ್ನ ಧೋನಿ ಕಾಲಿಗೆರಗುವಷ್ಟರಲ್ಲಿ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.

ತಕ್ಷಣ ಆತನನ್ನು ಮೈದಾನದಿಂದ ಹೊರಗೆ ಕಳುಹಿಸಲಾಯಿತು. ಆದರೆ ಬೇರೆ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಹೇಳಿಕೊಂಡಿದೆ. ಈ ರೀತಿ ಕ್ರಿಕೆಟ್ ಆಡುವಾಗ ಅದೆಷ್ಟೋ ಬಾರಿ ಹುಚ್ಚು ಅಭಿಮಾನಿಗಳು ಮೈದಾನಕ್ಕೆ ಲಗ್ಗೆಯಿಟ್ಟ ಉದಾಹರಣೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ