ಭರತ್ ಅರುಣ್ ಪರ ಬ್ಯಾಟ್ ಬೀಸುತ್ತಿರುವ ವೇಗಿಗಳು

ಗುರುವಾರ, 15 ಸೆಪ್ಟಂಬರ್ 2016 (11:02 IST)
ಕಿವೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದರೆ ತಮಗೆ ಬೌಲಿಂಗ್ ಕೋಚ್ ಆಗಿ 'ಭರತ್ ಅರುಣ್' ಅವರೇ ಬೇಕೆಂದು ಟೀಮ್ ಇಂಡಿಯಾ ವೇಗಿಗಳು ಹಠ ಹಿಡಿದಿದ್ದಾರೆ.

2013ರಿಂದ 14ರವರೆಗೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಯಶಸ್ಸು ಕಂಡಿದ್ದ ಭರತ್ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ಮರಳಿ ತರಬೇಕು ಎಂಬುದು ವೇಗಿಗಳ ಒಕ್ಕೊರಲ ಮನವಿ.
 
ಭರತ್ ಅರುಣ್ ಅವರು ಕೋಚ್ ಆಗಿದ್ದಾಗ ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು.  ಪ್ರಮುಖ ವೇಗಿ ಇಶಾಂತ್ ಶರ್ಮಾ 17 ಪಂದ್ಯಗಳಿಂದ 57 ವಿಕೆಟ್ ಪಡೆದಿದ್ದರು. 74/7 ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಯುಪಿ ವೇಗಿ ಮೊಹಮ್ಮದ್ ಶಮಿ 12 ಪಂದ್ಯ 47 ವಿಕೆಟ್, ಭುವನೇಶ್ವರ್ ಕುಮಾರ್ 8 ಪಂದ್ಯ 23 ವಿಕೆಟ್, ಉಮೇಶ್ ಯಾದವ್ 8ಪಂದ್ಯಗಳಿಂದ 21 ವಿಕೆಟ್ ಪಡೆದು ಮಿಂಚಿದ್ದರು. 
 
ಭರತ್ ಮಾರ್ಗದರ್ಶದಲ್ಲಿ ಸ್ಪಿನ್ನರ್‌ಗಳು ಕೂಡ ಅದ್ಭುತ ಬೌಲಿಂಗ್ ಕೈಚಳಕವನ್ನು ತೋರಿದ್ದರು. ರವೀಂದ್ರ ಜಡೇಜಾ 11 ಪಂದ್ಯಗಳಲ್ಲಿ
41 ಬಲಿ ಪಡೆದಿದ್ದರೆ, ಅಮಿತ್ ಮಿಶ್ರಾ 5 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದರು. 
 
ಹೀಗಾಗಿ ತಮಗೆ ಭರತ್ ಅರುಣ್ ಅವರೇ ಬೇಕು ಎಂದು ವೇಗದ ಬೌಲರ್‌ಗಳು ಆಗ್ರಹಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ