ಕರ್ನಾಟಕಕ್ಕೆ 2013-14 ಮತ್ತು 2014-15ರ ಸಾಲಿನಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರ್ ಟ್ರೋಫಿ ಮತ್ತು ಇರಾನಿ ಕಪ್ ಪ್ರಶಸ್ತಿಗಳನ್ನು ಗೆಲ್ಲುವುದಕ್ಕೆ ಮಾರ್ಗದರ್ಶನ ಮಾಡಿದ್ದ ಅರುಣ್ ಕುಮಾರ್ ಪ್ರಸಕ್ತ ಶಿವಮೊಗ್ಗದಲ್ಲಿ ಎನ್‌ಸಿಎ ವಲಯ ಕ್ರಿಕೆಟರುಗಳಿಗೆ ಕೋಚಿಂಗ್ ನೀಡುತ್ತಿದ್ದಾರೆ. ಕರ್ನಾಟಕ ಹಿರಿಯ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ತಮ್ಮ ಸಾಧನೆಯನ್ನು ಪರಿಗಣಿಸಿ, ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್‌ಗೆ ತಾವು ಪ್ರಬಲ ಸ್ಪರ್ಧಿಯೆಂದು ಭಾವಿಸುವುದಾಗಿ ಅರುಣ್ ಕುಮಾರ್ ಹೇಳಿದ್ದಾರೆ.
ರಾಷ್ಟ್ರೀಯ ತಂಡದ ಕೋಚ್ ಹುದ್ದೆಗೆ ತಮಗೆ ಎಲ್ಲಾ ಅರ್ಹತೆಗಳಿವೆ. ನಾನು ಕೋಚ್ ಮಾಡಿದ ಮನೀಶ್ ಪಾಂಡೆ, ಕೆ.ಎಲ್. ರಾಹುಲ್, ಮಾಯಾಂಕ್ ಅಗರವಾಲ್, ಕರುಣ್ ನಾಯರ್ ಟೀಂ ಇಂಡಿಯಾಗೆ ಮತ್ತು ಭಾರತ ಎ ತಂಡಕ್ಕೆ ಸೇರ್ಪಡೆಯಾಗಿದ್ದಾರೆಂದು ಅವರು ಹೇಳಿದರು.
ಟೀಂ ಡೈರೆಕ್ಟರ್ ರವಿ ಶಾಸ್ತ್ರಿ ಮತ್ತು ಸಹಾಯಕ ಕೋಚ್‌ಗಳಾದ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಆರ್. ಶ್ರೀಧರ್ ಅವಧಿ ವಿಶ್ವ ಟಿ 20 ಬಳಿಕ ಮುಗಿದಿದ್ದು, ಬಿಸಿಸಿಐ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮುಂಚಿತವಾಗಿ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಿದೆ.