ಗೌತಮ್ ಗಂಭೀರ್ ಆಲ್ ಟೈಮ್ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕ

ಮಂಗಳವಾರ, 5 ಮೇ 2020 (09:28 IST)
ನವದೆಹಲಿ: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಆಲ್ ಟೈಮ್ ಫೇವರಿಟ್ ಕ್ರಿಕೆಟ್ ತಂಡಕ್ಕೆ ಟೀಂ ಇಂಡಿಯಾ ಮಾಜಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಯನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ.


ಅನಿಲ್ ಕುಂಬ್ಳೆಯಷ್ಟು ನನ್ನನ್ನು ಬೆಂಬಲಿಸಿದವರು ಯಾರೂ ಇರಲಿಲ್ಲ. ಅವರು ಕೇಳಿದರೆ ಪ್ರಾಣವನ್ನೇ ಕೊಡುವೆ ಎಂದಿದ್ದ ಗಂಭೀರ್ ಈಗ ತಮ್ಮ ಮೆಚ್ಚಿನ ತಂಡಕ್ಕೆ ಅವರನ್ನೇ ನಾಯಕರಾಗಿ ಮಾಡಿದ್ದಾರೆ.

ಬಹುಶಃ ಗಂಗೂಲಿ, ಧೋನಿ ಹಾಗೆ ಅನಿಲ್ ಕುಂಬ್ಳೆಗೂ ಹೆಚ್ಚು ಸಮಯ ಭಾರತದ ನಾಯಕತ್ವ ವಹಿಸುವ ಅವಕಾಶ ಸಿಕ್ಕಿದ್ದರೆ ಅವರು ಹಲವು ದಾಖಲೆ ಮಾಡುತ್ತಿದ್ದರು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ