ಪಾಕ್ ನಾಯಕನ ಬೆಂಬಲಕ್ಕೆ ನಿಂತ ಗಂಗೂಲಿ, ಹರ್ಭಜನ್ ಸಿಂಗ್!

ಶನಿವಾರ, 17 ಜೂನ್ 2017 (11:13 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್ ಗೇರಿದ ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕ್ ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿರುವ ಪಾಕ್ ಮಾಜಿ ಆಟಗಾರ ಅಮೀರ್ ಸೊಹೈಲ್ ಗೆ ಭಾರತದ ಸೌರವ್ ಗಂಗೂಲಿ ಮತ್ತು ಹರ್ಭಜನ್ ಸಿಂಗ್ ತಪರಾಕಿ ನೀಡಿದ್ದಾರೆ.

 
ಪಾಕ್ ಮಾಜಿ ಆಟಗಾರನ ಆರೋಪವನ್ನು ಅರ್ಥಹೀನ ಮತ್ತು ತೀರಾ ಕೀಳು ಮಟ್ಟದ್ದು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಅವರು ಟೂರ್ನಮೆಂಟ್ ನಲ್ಲಿ ಇಲ್ಲಿಯವರೆಗೆ ಬಂದ ಹಾದಿಯನ್ನು ನೋಡಿ ಅಭಿನಂದನೆ ಸಲ್ಲಿಸಬೇಕು ಎಂದಿದ್ದಾರೆ.

ಇನ್ನೊಂದೆಡೆ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಕೂಡಾ ಸರ್ಫರಾಜ್ ಬೆಂಬಲಕ್ಕೆ ನಿಂತಿದ್ದಾರೆ. ‘ಈ ರೀತಿಯ ಹೇಳಿಕೆ ನೀಡುವುದರಿಂದ ಅವರು ತಮ್ಮ ಗೌರವವನ್ನು ತಾವೇ ಹಾಳು ಮಾಡುತ್ತಿದ್ದಾರೆ. ಕಠಿಣ ಪರಿಶ್ರಮ ಪಟ್ಟ ಮೇಲೂ ಮಾಜಿ ಆಟಗಾರರೊಬ್ಬರು ಈ ರೀತಿ ಹೇಳುವುದರಿಂದ ಎಷ್ಟು ಬೇಸರವಾಗುತ್ತದೆ ಎನ್ನುವುದು ನನಗೆ ಗೊತ್ತು’ ಎಂದು ಭಜಿ ಹೇಳಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ