ನನ್ನ ಬ್ಯಾಟಿಂಗ್ ನೀವು ನೋಡಿಲ್ಲವಲ್ಲ ಎಂದು ಡೆಲ್ಲಿ ಡ್ಯಾಶರ್ ಗಳಿಗೆ ದ್ರಾವಿಡ್ ಹೇಳಿದ್ದೇಕೆ?

ಶುಕ್ರವಾರ, 5 ಮೇ 2017 (17:18 IST)
ನವದೆಹಲಿ: ನಿನ್ನ 63 ಬಾಲ್ ಗಳಲ್ಲಿ 143 ರನ್ ಗಳ ಅಭೂತಪೂರ್ವ ಜತೆಯಾಟವಾಡಿದ್ದ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಗೆ ರಾಹುಲ್ ದ್ರಾವಿಡ್ ನನ್ನ ಬ್ಯಾಟಿಂಗ್ ವಿಡಿಯೋ ನೀವು ನೋಡದೇ ಇದ್ದಿದ್ದೇ ಒಳ್ಳೆಯದಾಯಿತು ಎಂದಿದ್ದಾರೆ.


‘ಸದ್ಯ, ನನಗೆ ಒಂದೇ ಒಂದು ಸಂತೋಷವೆಂದರೆ, ನೀವಿಬ್ಬರೂ ನನ್ನ ಬ್ಯಾಟಿಂಗ್ ನ ವಿಡಿಯೋ ನೋಡಿರಲಿಲ್ಲವಲ್ಲ. ನೋಡಿದ್ದರೆ ನಿಮಗೆ ಇಂತಹ ಪ್ರಚಂಡ ಇನಿಂಗ್ಸ್ ಆಡಲು ಸಾಧ್ಯವಾಗುತ್ತಿರಲಿಲ್ಲ. ಅಭಿನಂದನೆಗಳು ಹುಡುಗರೇ’ ಎಂದು ಡೆಲ್ಲಿ ಕೋಚ್ ದ್ರಾವಿಡ್ ಬೆನ್ನು ತಟ್ಟಿದ್ದಾರೆ.

ಅಸಾಧ್ಯ ಗೆಲುವನ್ನು ತಂದುಕೊಟ್ಟ ಹುಡುಗರ ಬಗ್ಗೆ ದ್ರಾವಿಡ್ ಮನತುಂಬಿ ಹೊಗಳಿದ್ದಾರೆ. ‘ರಿಷಬ್ ಸ್ವಾರ್ಥರಹಿತ ಮನೋಭಾವ ನನಗೆ ಹೆಮ್ಮೆಯೆನಿಸಿತು. ಅವರು 90 ರ ಅಂಚಿನಲ್ಲಿದ್ದರೂ, ಸ್ವಂತ ದಾಖಲೆ ಬಗ್ಗೆ ಯೋಚಿಸದೆ, ತಂಡದ ಬಗ್ಗೆ ಯೋಚನೆ ಮಾಡಿದರು’ ಎಂದು ರಿಷಬ್ ರನ್ನು ಕೊಂಡಾಡಿದ್ದಾರೆ.

ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಕನ್ನಡಿಗ ಕರುಣ್ ನಾಯರ್ ಮುನ್ನಡೆಸುತ್ತಿದ್ದಾರೆ. ಕರುಣ್ ನಾಯಕತ್ವದಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ