ಅವಿಶ್ವಸನೀಯ: 65 ಎಸೆತಗಳಲ್ಲಿ 145 ರನ್ ಚಚ್ಚಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ (ವಿಡಿಯೋ)

ಬುಧವಾರ, 7 ಸೆಪ್ಟಂಬರ್ 2016 (14:45 IST)
ಆಸೀಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಗುರುವಾರ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಅಕ್ಷರಶಃ ರನ್‌ಗಳ ಮೇಘ ಸ್ಪೋಟವನ್ನೇ ಸೃಷ್ಟಿಸಿದರು. ಕೇವಲ 65 ಎಸೆತಗಳಲ್ಲಿ ಅಜೇಯ 145 ರನ್ ಸಿಡಿಸಿದ ಅವರ ಸಿಡಿಲಬ್ಬರದ ಬ್ಯಾಟಿಂಗ್ ನಿಜಕ್ಕೂ ಅವಿಶ್ವಸನೀಯವಾಗಿತ್ತು. ಅವರ ಈ ಅಪ್ರತಿಮ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿ ಗೆಲುವಿನ ನಗೆ ಬೀರಿತು. 
ಲಂಕಾ ಬೌಲಿಂಗ್‌ನ್ನು ಚೆಂಡಾಡಿದ 27ರ ಹರೆಯದ ದಾಂಡಿಗ 14 ಬೌಂಡರಿಗಳು ಮತ್ತು 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದಲೇ 110 ರನ್ ಕೂಡಿ ಹಾಕಿದರು. 
 
ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಅದ್ದೂರಿ ಬ್ಯಾಟಿಂಗ್ ಸಹಾಯದಿಂದ ಆಸ್ಟೇಲಿಯಾ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 263 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಇದು ಅಂತರಾಷ್ಟ್ರೀಯ ಟಿ20ಯಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವೆನಿಸಿದೆ. 
 
2007ರಲ್ಲಿ ಕೀನ್ಯಾ ವಿರುದ್ಧ ಲಂಕಾ ತಂಡ ದಾಖಲಿಸಿದ್ದ 260 ರನ್ ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು. 
 
ಆಸೀಸ್ ನೀಡಿದ ಪರ್ವತದಂತಹ ಮೊತ್ತವನ್ನು ಬೆನ್ನಟ್ಟಿ ಸಾಗಿದ ಲಂಕಾ ಕೇವಲ 178/9 ರನ್ ಗಳಿಸಿ ಭಾರೀ ಅಂತರದ ಸೋಲನ್ನೊಪ್ಪಿಕೊಂಡಿತು. 
ಅವಿಶ್ವಸನೀಯ: 65 ಎಸೆತಗಳಲ್ಲಿ 145 ರನ್ ಚಚ್ಚಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ (ವಿಡಿಯೋ)

ವೆಬ್ದುನಿಯಾವನ್ನು ಓದಿ