ಡ್ರಾಪ್ ಮಾಡಿದ್ದರಿಂದ ತುಂಬಾ ನೋವಾಗಿತ್ತು: ಮ್ಯಾಕ್ಸ್‌ವೆಲ್

ಗುರುವಾರ, 23 ಜೂನ್ 2016 (17:11 IST)
ಪ್ರಸಕ್ತ ತ್ರಿರಾಷ್ಟ್ರಗಳ ಏಕ ದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಿಗೆ ತಮ್ಮನ್ನು ಡ್ರಾಪ್ ಮಾಡಿದಾಗ ತಮಗೆ ನೋವಾಯಿತು ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಒಪ್ಪಿಕೊಂಡಿದ್ದಾರೆ.  ವೆಸ್ಟ್ ಇಂಡೀಸ್ ವಿರುದ್ಧ ಕಮ್ ಬ್ಯಾಕ್ ಆಟದಲ್ಲಿ ತಮ್ಮ ಟೀಕಾಕಾರರಿಗೆ ಮಂಗಳವಾರ ಉತ್ತರಿಸಿದ ಮ್ಯಾಕ್ಸ್‌ವೆಲ್, 26 ಎಸೆತಗಳಲ್ಲಿ ಅಬ್ಬರದ 46 ರನ್ ಸಿಡಿಸಿ ತಮ್ಮ ತಂಡ ಫೈನಲ್ ತಲುಪಲು ನೆರವಾಗಿದ್ದರು. 
 
ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಏಕಂಕಿಯ ಸ್ಕೋರ್‌ಗಳಿಂದ ಅವರನ್ನು ಬದಿಗಿರಿಸಲಾಗಿತ್ತು. ದ.ಆಫ್ರಿಕಾ ವಿರುದ್ಧ ಅಂಪೈರ್ ತಪ್ಪು ತೀರ್ಪಿನಿಂದ ಎಲ್‌ಬಿಡಬ್ಲ್ಯುಗೆ ಬಲಿಯಾದ ಬಳಿಕ ಅವರಿಗೆ ಕೊಕ್ ನೀಡಲಾಗಿತ್ತು. 
 
ಆ ಹಂತದಲ್ಲಿ ಅವರನ್ನು ಡ್ರಾಪ್ ಮಾಡಿದ್ದರಿಂದ ತುಂಬಾ ನಿರಾಶೆಯಾಗಿತ್ತು. ಇದರಿಂದ ಇನ್ನಷ್ಟು ತರಬೇತಿ ಪಡೆಯಲು ತಮಗೆ ಪ್ರೇರೇಪಿಸಿತು. ಕಳೆದ ಒಂದು ವಾರದಲ್ಲಿ ಚೆನ್ನಾಗಿ ತರಬೇತಿ ಪಡೆದು ತಂಡದ ಪಟ್ಟಿಯಲ್ಲಿ ಕಮ್ ಬ್ಯಾಕ್ ಆಗಿದ್ದೇನೆ ಎಂದು ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ