ಹರ್ಭಜನ್ ಸಿಂಗ್ ಗೆ ಟೀಂ ಇಂಡಿಯಾದ ನಾಯಕನಾಗುವ ಛಾನ್ಸ್!

ಬುಧವಾರ, 8 ಫೆಬ್ರವರಿ 2017 (11:05 IST)
ನವದೆಹಲಿ: ಅರೇ ಇದು ಹೇಗೆ ಸಾಧ್ಯ? ಟೀಂ ಇಂಡಿಯಾಕ್ಕೆ ಒಬ್ಬನೇ ನಾಯಕ ಅದು ವಿರಾಟ್ ಕೊಹ್ಲಿ. ಹರ್ಭಜನ್ ಸಿಂಗ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲೇ ಹೆಣಗಾಡುತ್ತಿದ್ದಾರೆ. ಅಂತಹದ್ದರಲ್ಲಿ ಭಜಿ ಹೇಗೆ ನಾಯಕರಾಗುತ್ತಾರೆ?

 
ಆದರೆ ಭಜಿ ನಾಯಕರಾಗುತ್ತಿರುವುದು ಟೀಂ ಇಂಡಿಯಾ ರಾಷ್ಟ್ರೀಯ ತಂಡಕ್ಕಲ್ಲ. ಈ ಹಿರಿಯ ಆಟಗಾರನಿಗೆ ಬಹುಶಃ ವೃತ್ತಿ ಜೀವನದಲ್ಲಿ ಅಂತಹದ್ದೊಂದು ಕನಸು ನನಸಾಗಲಿಕ್ಕಿಲ್ಲ. ಆದರೇನಂತೆ? ಟೀಂ ಇಂಡಿಯಾದ ಬಹುತೇಕ ಸ್ಟಾರ್ ಆಟಗಾರರನ್ನು ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಸರಣಿಯಲ್ಲಿ ಮುನ್ನಡೆಸಲಿದ್ದಾರೆ.  ಉತ್ತರ ವಲಯದ ತಂಡದಲ್ಲಿ ಬಹುತೇಕ ಟೀಂ ಇಂಡಿಯಾದ ಆಟಗಾರರಿದ್ದು, ಅದಕ್ಕೆ ಭಜಿ ನಾಯಕರಾಗಲಿದ್ದಾರೆ.

ಫೆಬ್ರವರಿ 12 ರಿಂದ ಮುಂಬೈಯಲ್ಲಿ ದಕ್ಷಿಣವಲಯದ ವಿರುದ್ಧ ಅಂತರ್ ವಲಯ ಕಿರು ಮಾದರಿ ಸ್ಪರ್ಧೆ ನಡೆಯಲಿದ್ದು, ಉತ್ತರ ವಲಯ ತಂಡದಲ್ಲಿ ಟೀಂ ಇಂಡಿಯಾದ ಶಿಖರ್ ಧವನ್,  ಗೌತಮ್ ಗಂಭೀರ್,  ಯುವರಾಜ್ ಸಿಂಗ್,  ಆಶಿಷ್ ನೆಹ್ರಾ, ಯಜುವೇಂದ್ರ ಚಾಹಲ್,  ರಿಷಬ್ ಪಂತ್, ಪರ್ವೇಜ್ ರಸೂಲ್ ಸೇರಿದಂತೆ ಬಹುತೇಕರು ಆಡಲಿದ್ದಾರೆ. ಬಹುತೇಕ ಫಾರ್ಮ್ ಕಳೆದುಕೊಂಡ ಆಟಗಾರರಿದ್ದು, ಟೀಂ ಇಂಡಿಯಾದ ಬಾಗಿಲು ತಟ್ಟಲು ಇವರಿಗೆಲ್ಲಾ ಇದು ಉತ್ತಮ ಅವಕಾಶ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ