ಏನು ಬೇಕಾದ್ರೂ ಕೇಳು! ಗೌತಮ್ ಗಂಭೀರ್ ಸಹಾಯಕ್ಕೆ ರೆಡಿಯಾದ ಹರ್ಭಜನ್ ಸಿಂಗ್

ಭಾನುವಾರ, 2 ಆಗಸ್ಟ್ 2020 (12:16 IST)
ನವದೆಹಲಿ: ದೆಹಲಿ ಸಂಸದರೂ ಆಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಶಿಕ್ಷಣ ಮತ್ತು ಅವರಿಗೆ ಸೂರು ಕಲ್ಪಿಸುವ ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದಾರೆ.


ಇಂತಹ ಸುಮಾರು 25 ಮಕ್ಕಳ ಸಂಪೂರ್ಣ ಶಿಕ್ಷಣ ಖರ್ಚು ಮತ್ತು ಅವರಿಗೆ ನೆಲೆ ಕಲ್ಪಿಸುವ ಸಂಪೂರ್ಣ ಹೊಣೆ ನನ್ನದು. ಇದಕ್ಕಾಗಿ ‘ಪಂಖ್’ ಎನ್ನುವ ಹೊಸ ಯೋಜನೆ ಶುರು ಮಾಡಿಕೊಳ್ಳುತ್ತಿರುವುದಾಗಿ ಗಂಭೀರ್ ಟ್ವೀಟ್ ಮಾಡಿದ್ದರು.

ಗಂಭೀರ್ ಒಳ್ಳೆಯ ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕ್ರಿಕೆಟಿಗ ಹರ್ಭಜನ್ ನಿನಗೆ ನನ್ನಿಂದಾಗುವ ಏನೇ ಸಹಾಯ ಬೇಕಿದ್ದರೂ ಕೇಳು. ಒಳ್ಳೆಯ ಕೆಲಸಕ್ಕೆ ನಾನೂ ಕೈ ಜೋಡಿಸಲು ಸಿದ್ಧ. ನಿನ್ನ ಜತೆ ಸದಾ ಇರುವೆ ಎಂದು ಬೆಂಬಲ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ