ಕೊಹ್ಲಿಯನ್ನು ಸ್ವೀಪರ್ ಎಂದವನ ವಿರುದ್ಧ ಹರ್ಭಜನ್ ಕಿಡಿ ಕಿಡಿ

ಶನಿವಾರ, 16 ಸೆಪ್ಟಂಬರ್ 2017 (09:41 IST)
ಮುಂಬೈ: ಟೀಂ ಇಂಡಿಯಾ ನಾಯಕ ಹರ್ಭಜನ್ ಸಿಂಗ್ ರನ್ನು ಸ್ವೀಪರ್ ಎಂದು ಟ್ವಿಟರ್ ನಲ್ಲಿ ಬರೆದುಕೊಂಡು ಅವಮಾನ ಮಾಡಿದ ಆಸ್ಟ್ರೇಲಿಯಾ ಪತ್ರಕರ್ತನ ವಿರುದ್ಧ ಹರ್ಭಜನ್ ಸಿಂಗ್ ಕಿಡಿ ಕಾರಿದ್ದಾರೆ.

 
ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಇಲೆವೆನ್ ಟಿ20 ಪಂದ್ಯಾವಳಿ ಬಗ್ಗೆ ಉಲ್ಲೇಖಿಸುತ್ತಾ ಕೊಹ್ಲಿ ಕಸ ಗುಡಿಸುತ್ತಿರುವ ಫೋಟೋ ಪ್ರಕಟಿಸಿದ್ದ ಆಸ್ಟ್ರೇಲಿಯಾ ಪ್ರತ್ರಕರ್ತ ಡೆನ್ನಿಸ್ ಫ್ರೀಡ್ ಮ್ಯಾನ್ ಸ್ವೀಪರ್ ಎಂದು ಕರೆದಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಅದಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡಾ ಕಿರಿ ಕಾರಿದ್ದು, ಈ ಜಮಾನದ ಶ್ರೇಷ್ಠ ಕ್ರಿಕೆಟಿಗನನ್ನು ಹೀಗೆಲ್ಲಾ ಹೀಯಾಳಿಸಲು ನಿಮಗೆ ನಾಚಿಕೆಯಾಗಬೇಕು ಎಂದು ಜರೆದಿದ್ದಾರೆ.

ಇದನ್ನೂ ಓದಿ.. ಡೇರಾ ಬಾಬಾನ ಮತ್ತೆರಡು ಪ್ರಕರಣಗಳು ಇಂದು ವಿಚಾರಣೆಗೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ