ಹರ್ಮನ್ ಪ್ರೀತ್ ಕೌರ್ ವಿದೇಶಿ ಟಿ ಟ್ವೆಂಟಿಗೆ ಫ್ರಾಂಚೈಸಿಗೆ ಸಹಿ

ಶನಿವಾರ, 25 ಜೂನ್ 2016 (19:25 IST)
ವಿದೇಶಿ ಟಿ 20 ಫ್ರಾಂಚೈಸಿಗೆ ಸಹಿ ಹಾಕಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಕೌರ್ ಭುಲ್ಲಾರ್ ಪಾತ್ರರಾಗಿದ್ದಾರೆ.  ಡಿಸೆಂಬರ್-ಜನವರಿಯಲ್ಲಿ ನಡೆಯುವ ಅತೀ ಗಮನಸೆಳೆದ ಪಂದ್ಯಾವಳಿಯಲ್ಲಿ ಬಿಗ್ ಬ್ಯಾಷ್ ಲೀಗ್‌ನ ಸಿಡ್ನಿ ಥಂಡರ್ ಭಾರತೀಯಳ ಸೇವೆಯನ್ನು ಪಡೆದಿದ್ದಾರೆ.
 
ಹಿರಿಯ ಆಟಗಾರರಾದ ನಾಯಕಿ ಮಿಥಾಲಿ ರಾಜ್ ಮತ್ತು ವೇಗದ ಬೌಲರ್ ಜುಲಾನ್ ಗೋಸ್ವಾಮಿಗೆ ಕೂಡ ಕಳೆದ ವರ್ಷ ಅಡೆಲೈಡ್ ಸ್ಟ್ರೈಕರ್ಸ್ ಸಂಪರ್ಕಿಸಿತ್ತು. ಆದರೆ ಭಾರತೀಯ ಮಂಡಳಿ ಆಫರ್ ಒಪ್ಪಿಕೊಳ್ಳಲು ಅನುಮತಿ ನೀಡಲಿಲ್ಲ ಮತ್ತು ದೇಶೀಯ ಮಹಿಳಾ ಟಿ 20 ಲೀಗ್‌ನಲ್ಲಿ ಆಡುವಂತೆ ಸೂಚಿಸಿತ್ತು. 
 
11 ಮಹಿಳಾ ಆಟಗಾರರಿಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಗಳನ್ನು ಪರಿಚಯಿಸಿತ್ತು ಮತ್ತು ಲೋಧಾ ಸಮಿತಿ ಸಲಹೆ ಮಾಡಿದ ಅನೇಕ ಸುಧಾರಣೆಗಳನ್ನು ಅಳವಡಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ