ಸ್ಪಿನ್ನರ್ ಅನಿಲ್ ಕುಂಬ್ಳೆ ಗುರುವಾಗಿ ಹೇಗಿರ್ತಾರೆ ಗೊತ್ತಾ?

ಭಾನುವಾರ, 1 ಜನವರಿ 2017 (08:21 IST)
ನವದೆಹಲಿ: ಅನಿಲ್ ಕುಂಬ್ಳೆ ಸ್ಪಿನ್ನರ್ ಆಗಿ ಭಾರತ ಕ್ರಿಕೆಟ್ ತಂಡವನ್ನು ಆಳುತ್ತಿದ್ದಾಗ ಅವರು ಹೇಗಿದ್ದರೆಂದು ಎಲ್ಲರಿಗೂ ಗೊತ್ತು. ಬುದ್ಧಿವಂತ ಬೌಲರ್ ಎಂದು ಕರೆಯಿಸಿಕೊಂಡಿದ್ದ ಅವರು ಫೀಲ್ಡ್ ನಲ್ಲೂ ಲೆಕ್ಕಾಚಾರ ತಪ್ಪುತ್ತಿರಲಿಲ್ಲ. ಕೋಚ್ ಆಗಿ ಅವರು ಹೇಗಿರ್ತಾರೆ ಎನ್ನುವುದನ್ನು ಚೇತೇಶ್ವರ ಪೂಜಾರ ಹೇಳಿಕೊಂಡಿದ್ದಾರೆ.


ಅನಿಲ್ ಕುಂಬ್ಳೆ ಕೋಚ್ ಆದ ಮೇಲೆ ಟೀಂ ಇಂಡಿಯಾ ಸಾಕಷ್ಟು ಯಶಸ್ಸು ಕಂಡಿದೆ. ಅವರೊಬ್ಬ ಉತ್ತಮ ಸ್ಪಿನ್ನರ್ ಆಗಿರುವುದರಿಂದ ಭಾರತ ತಂಡಕ್ಕೆ ಬಂದ ಉದಯೋನ್ಮುಖ ಸ್ಪಿನ್ನರ್ ಗಳಿಂದ ಶ್ರೇಷ್ಟವಾದುದನ್ನೇ ಹೊರ ತೆಗೆಯುತ್ತಿದ್ದಾರೆ.

“ಅವರು ಸ್ವತಃ ಒಬ್ಬ ಅನುಭವಿ ಬೌಲರ್ ಆಗಿರುವುದರಿಂದ ತಮ್ಮಅನುಭವವನ್ನು ಧಾರೆಯೆರೆಯುತ್ತಾರೆ. ಉದಾಹರಣೆಗೆ, ಒಬ್ಬ ಬೌಲರ್ ಹೇಗೆ ಆಲೋಚಿಸುತ್ತಾನೆ, ಕಷ್ಟದ ಸಂದರ್ಭದಲ್ಲಿ ಆತನ ಲೆಕ್ಕಾಚಾರ ಹೇಗಿರುತ್ತದೆ ಎಂಬುದನ್ನು ಅವರು ನಮಗೆ ಹೇಳುತ್ತಾರೆ. ಅವರ ಲೆಕ್ಕಾಚಾರಗಳು ಯಾವತ್ತೂ ತಪ್ಪಿಲ್ಲ” ಎಂದು ಚೇತೇಶ್ವರ್ ಹೇಳಿಕೊಂಡಿದ್ದಾರೆ.

ಬ್ಯಾಟಿಂಗ್ ತಾಂತ್ರಿಕತೆ ಬಗ್ಗೆ ಕುಂಬ್ಳೆ ಆಟಗಾರರಿಗೆ ಹೆಚ್ಚು ಸಲಹೆ ಕೊಡುವುದಿಲ್ಲವಂತೆ. ಒಂದು ವೇಳೆ ತೀರಾ ಗಂಭೀರ ಸಮಸ್ಯೆಯಿದ್ದರೆ ಮಾತ್ರ ಅವರು ಸಲಹೆ ಕೊಡುತ್ತಾರೆ. ಇಲ್ಲದಿದ್ದರೆ, ಫೀಲ್ಡಿಂಗ್ ಕೋಚ್ ಸಂಜಯ್ ಬಂಗಾರ್ ಗೆ ಬಿಟ್ಟು ಬಿಡುತ್ತಾರೆ ಎಂದು ಪೂಜಾರ ಹೇಳಿಕೊಂಡಿದ್ದಾರೆ.

ಉತ್ತಮ ಆರಂಭ ಪಡೆದರೂ ಸ್ಕೋರ್ ಮಾಡಲು ಹೆಣಗಾಡುತ್ತಿದ್ದಾಗ ತನಗೆ ಕುಂಬ್ಳೆ ತಾನು ಎಡವುತ್ತಿರುವುದೆಲ್ಲಿ ಎಂದು ತೋರಿಸಿಕೊಟ್ಟರು. ಅವರ ಸಲಹೆ ಕೇಳಿದ ಮೇಲೇ ನನಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೂರು ಶತಕ ದಾಖಲಿಲು ಸಾಧ್ಯವಾಯಿತು ಎಂದು ಗುರುವಿನ ಸ್ಮರಣೆ ಮಾಡುತ್ತಾರೆ ಪೂಜಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ