ರೋಹಿತ್ ಶರ್ಮಾಗೆ ಹಿಟ್ ಮ್ಯಾನ್ ಹೆಸರು ಬಂದಿದ್ದು ಹೇಗೆ ಗೊತ್ತಾ?

ಮಂಗಳವಾರ, 21 ಮೇ 2019 (09:01 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರನ್ನು ಕ್ರಿಕೆಟ್ ಪ್ರಿಯರು, ವೀಕ್ಷಕ ವಿವರಣೆಕಾರರು ಸಂಬೋಧಿಸುವಾಗ ಹಿಟ್ ಮ್ಯಾನ್ ಎಂದೇ ಪ್ರೀತಿಯಿಂದ ಕರೆಯುತ್ತಾರೆ.


ಅಸಲಿಗೆ ರೋಹಿತ್ ಗೆ ಈ ಟ್ಯಾಗ್ ಬಂದಿದ್ದು ಹೇಗೆ ಗೊತ್ತಾ? ಇದನ್ನು ಸ್ವತಃ ರೋಹಿತ್ ಬಹಿರಂಗಪಡಿಸಿದಿದ್ದಾರೆ. ಈ ಟ್ಯಾಗ್ ಬಂದಿದ್ದು 2013 ರಿಂದ ಎಂದು ರೋಹಿತ್ ಹೇಳಿದ್ದಾರೆ.

ಆಗ ರೋಹಿತ್ ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ ಹೊಡೆದಿದ್ದರು. ರೋಹಿತ್ ಎಂದು ಇಂಗ್ಲಿಷ್ ನಲ್ಲಿ ಬರೆಯುವಾಗ ಕೊನೆಯ ಎರಡು ಅಕ್ಷರ ಹಿಟ್ ಎಂದು ಬರುತ್ತದೆ. ಹಾಗಾಗಿಯೇ ಅಂದು ಕಾಮೆಂಟೇಟರ್ ಗಳು ರೋಹಿತ್ ರನ್ನು ಹಿಟ್ ಮ್ಯಾನ್ ಎಂದು ಕರೆದರು. ಅದಾದ ಬಳಿಕ ರೋಹಿತ್ ಹೆಸರಿನ ಜತೆಗೆ ಹಿಟ್ ಮ್ಯಾನ್ ಎಂಬುದು ಅಂಟಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ