ನವದೆಹಲಿ: ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಾವು ಆಡುತ್ತಿದ್ದಾಗಲೂ ಅಷ್ಟೇ. ಯಾರಿಗೂ ಹೆದರದೆ ತಮ್ಮದೇ ಶೈಲಿಯಲ್ಲಿ ಬಾಲ್ ಚಚ್ಚುತ್ತಿದ್ದವರು. ಅವರ ಮುಂದೆ ಯಾವ ಬೌಲರ್ ಗಳಿದ್ದರೂ ಅವರಿಗೆ ಕ್ಯಾರೇ ಇರಲಿಲ್ಲ. ನಿವೃತ್ತಿಯಾದ ಮೇಲೂ ಟ್ವಿಟರ್ ನಲ್ಲಿ ಮಾಡುವ ಕಾಮೆಂಟ್ ಗಳ ವಿಚಾರದಲ್ಲೂ ಅಷ್ಟೇ ಅಂತೆ.
ಟ್ವಿಟರ್ ನಲ್ಲಿ ಯಾವುದೇ ಕ್ಷೇತ್ರ, ವ್ಯಕ್ತಿಗಳು ಎನ್ನದೇ ಸೆಹ್ವಾಗ್ ವಿಡಂಬನಾತ್ಮಕ ಸಂದೇಶ ಬರೆಯುತ್ತಲೇ ಇರುತ್ತಾರೆ. ಅವರ ಟ್ವೀಟ್ ಗಳು ಓದುಗರ ಅಚ್ಚುಮೆಚ್ಚಾಗಿವೆ. ಈ ರೀತಿ ಕಾಮೆಂಟ್ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ. ನನಗೆ ಯಾರ ಭಯವೂ ಇಲ್ಲ ಎಂದು ವೀರೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
“ಈಗ ನನಗೆ ಯಾರ ಭಯವೂ ಇಲ್ಲ. ಬಿಸಿಸಿಐ, ಮ್ಯಾಚ್ ರೆಫರಿ, ನನ್ನ ಪಂದ್ಯದ ಶುಲ್ಕ ಕಳೆಯಬಹುದು, ದಂಡ ಹಾಕಬಹುದು ಎಂಬ ಭಯವಿಲ್ಲ. ಟ್ವಿಟರ್ ಈಗ ನನ್ನ ಮೈದಾನ. ಇಲ್ಲಿ ಬರೆಯುವುದನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ” ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಭಾರತವನ್ನು ಲೇವಡಿ ಮಾಡಿದ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮಾರ್ಗನ್ ಜತೆಗಿನ ಟ್ವಿಟರ್ ಜಗಳದ ಬಗ್ಗೆ ಮಾತನಾಡಿದ ಸೆಹ್ವಾಗ್, ನನ್ನ ದೇಶವನ್ನು ಯಾರೂ ತಮಾಷೆ ಮಾಡುವುದನ್ನು ಸಹಿಸಲಾರೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ