ಬಿಸಿಸಿಐ ಅಧ್ಯಕ್ಷನಾಗುವ ಯೋಗ್ಯತೆ ನನಗಿಲ್ಲ ಎಂದು ಸೌರವ್ ಗಂಗೂಲಿ!

ಬುಧವಾರ, 4 ಜನವರಿ 2017 (09:43 IST)
ಕೋಲ್ಕೊತ್ತಾ: ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಪದಚ್ಯುತಗೊಳಿಸಿದ ಮೇಲೆ ಈ ಪ್ರತಿಷ್ಠಿತ ಹುದ್ದೆಗೆ ಗಂಗೂಲಿ ಅರ್ಹ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಸೌರವ್ ಗಂಗೂಲಿ ಮಾತ್ರ ಈ ಹುದ್ದೆ ನಿರ್ವಹಿಸುವ ಯೋಗ್ಯತೆ ತನಗಿಲ್ಲ ಎಂದಿದ್ದಾರೆ.


ನಿನ್ನೆಯಷ್ಟೇ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಕೂಡಾ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದರೆ ಸೂಕ್ತ ಎಂದಿದ್ದರು. ಮಾಧ್ಯಮಗಳಲ್ಲಿ ಅವರನ್ನೇ ಮುಂದಿನ ಅಧ್ಯಕ್ಷ ಪಟ್ಟಕ್ಕೆ ಕೂರಿಸಬಹುದು ಎಂಬ ಬಗ್ಗೆ ಭಾರೀ ಚರ್ಚೆಗಳಾಗಿತ್ತು. ಆದರೆ ಗಂಗೂಲಿ ಈ ಎಲ್ಲಾ ವರದಿಗಳನ್ನು ನಿರಾಕರಿಸಿದ್ದಾರೆ.

ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥರೂ ಆಗಿರುವ ಗಂಗೂಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು “ನನ್ನ ಹೆಸರನ್ನು ವಿನಾಕಾರಣ ಎಳೆದು ತರಲಾಗುತ್ತಿದೆ. ನಾನು ರಾಜ್ಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷನಾಗಿ ಒಂದು ವರ್ಷ ಪೂರೈಸಿದ್ದೇನಷ್ಟೇ. ಇನ್ನೂ ಎರಡು ವರ್ಷ ಅಧಿಕಾರಾವಧಿಯಿದೆ. ನಾನು ಇದಕ್ಕೆ ಅರ್ಹನಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೇ ನಮಗೆ ಬೇರೆ ದಾರಿಯಿಲ್ಲ. ಹೀಗಾಗಿ ಕೋಲ್ಕೊತ್ತಾ ಕ್ರಿಕೆಟ್ ಮಂಡಳಿಯಲ್ಲಿ ಲೋಧಾ ಸಮಿತಿ ವರದಿ ಜಾರಿಗೆ ತರುವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ