ನಾಯಕತ್ವ ತ್ಯಜಿಸಲು ಧೋನಿಗೆ ಸೂಚಿಸಿರಲಿಲ್ಲ ಎಂದ ಎಂಸ್ ಕೆ ಪ್ರಸಾದ್

ಮಂಗಳವಾರ, 10 ಜನವರಿ 2017 (08:55 IST)
ಮುಂಬೈ: ಸೀಮಿತ ಓವರ್ ಗಳ ಪಂದ್ಯಗಳ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿರಲಿಲ್ಲ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಪೂರ್ಣಪ್ರಮಾಣದ ನಾಯಕನಾಗಿ ಆಯ್ಕೆ ಮಾಡಲು ಧೋನಿಯನ್ನು ಕೆಳಗಿಳಿಯುವಂತೆ ರಣಜಿ ಪಂದ್ಯದ ವೇಳೆ ಒತ್ತಡ ಹೇರಲಾಗಿತ್ತು ಎಂಬ ವರದಿಗಳ ಹಿನ್ನಲೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

“ಇದು ಸಂಪೂರ್ಣ ಧೋನಿಯದ್ದೇ ನಿರ್ಧಾರ. ಅದಕ್ಕೆ ನಾವು ಅಭಾರಿಯಾಗಿದ್ದೇವೆ. ಅವರು ಭಾರತೀಯ ಕ್ರಿಕೆಟ್ ನ ಹಿತ ದೃಷ್ಟಯಿಂದ ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತೇವೆ” ಎಂದು ಪ್ರಸಾದ್ ಹೇಳಿದ್ದಾರೆ.

ಹಿಂದೆಯೂ ಪ್ರಮುಖ ಹಿರಿಯ ಆಟಗಾರರ ನಿವೃತ್ತಿ ವಿಚಾರದಲ್ಲಿ ಇಂತಹ ವಿವಾದಗಳು ಎದ್ದಿತ್ತು. ಅದರಲ್ಲೂ ವಿಶೇಷವಾಗಿ ಸಚಿನ್ ತೆಂಡುಲ್ಕರ್ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಹೇಳಿದ್ದಕ್ಕೆ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು ಎಂಬ ವಿವಾದ ಸೃಷ್ಟಿಯಾಗಿತ್ತು. ಆದರೆ ತೆಂಡುಲ್ಕರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ