ನಿನ್ನೆ ರಾತ್ರಿ ನಿದ್ದೆಯೇ ಮಾಡಿಲ್ಲ ಎಂದ ಕರುಣ್ ನಾಯರ್

ಮಂಗಳವಾರ, 20 ಡಿಸೆಂಬರ್ 2016 (16:40 IST)
ಚೆನ್ನೈ: ಈ ತ್ರಿಶತಕದ ಖುಷಿ ಮರೆಯಲು ತುಂಬಾ ಸಮಯಬೇಕು. ಇಡೀ ರಾತ್ರಿ ಸೆಲೆಬ್ರೇಷನ್ ನಲ್ಲೇ ಕಳೆದೆ ಎಂದು ಇಂಗ್ಲೆಂಡ್ ವಿರುದ್ಧ ತ್ರಿಶತಕ ಗಳಿಸಿದ ಕರುಣ್ ನಾಯರ್ ಹೇಳಿಕೊಂಡಿದ್ದಾರೆ.

ಈ ಅಮೋಘ ಪ್ರದರ್ಶನಕ್ಕೆ ಕರುಣ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ನಂತರ ಮಾತನಾಡಿದ ಅವರು “ನಿನ್ನೆ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ನನಗೆ ವಿಶ್ ಮಾಡಿ ಹಲವರು ಮೆಸೇಜ್ ಕಳುಹಿಸಿದ್ದರು. ಅವರಿಗೆಲ್ಲಾ ಉತ್ತರಿಸುವಷ್ಟರಲ್ಲಿ ಬೆಳಗಾಯಿತು” ಎಂದಿದ್ದಾರೆ.

ಇದೇ ವೇಳೆ ಸರಣಿಯಲ್ಲಿ ಒಂದು ದ್ವಿಶತಕ, ಶತಕದೊಂದಿಗೆ, 650 ಪ್ಲಸ್ ರನ್ ಮಾಡಿದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಯುವ ಆಟಗಾರರಿಗೆ ಕೊಹ್ಲಿ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ