ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಗೆ ಮಾಫಿ ನೀಡಿದ ಐಸಿಸಿ

ಗುರುವಾರ, 9 ಮಾರ್ಚ್ 2017 (09:31 IST)
ದುಬೈ: ದ್ವಿತೀಯ ಟೆಸ್ಟ್  ಪಂದ್ಯದ ವೇಳೆ ಡಿಆರ್ ಎಸ್ ತೆಗೆದುಕೊಳ್ಳುವಾಗ ಮೋಸದ ಹಾದಿ ತುಳಿದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಅವರ ಜತೆ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಐಸಿಸಿ  ಮಾಫಿ ನೀಡಿದೆ.

 
ಇದೊಂದು ಅದ್ಭುತ ಪಂದ್ಯವಾಗಿತ್ತು. ವೃಥಾ ಇಬ್ಬರೂ ನಾಯಕರ ಮೇಲೆ ಕ್ರಮ ಕೈಗೊಂಡು ಮೂರನೇ ಟೆಸ್ಟ್ ಪಂದ್ಯದ ಮೇಲೆ ಅನಿಶ್ಚಿತತೆ ಉಂಟು ಮಾಡಲು ಬಯಸುವುದಿಲ್ಲ. ಇಬ್ಬರೂ ಆಟಗಾರರನ್ನು ಮ್ಯಾಚ್ ರೆಫರಿ ಕರೆಸಿಕೊಂಡು ಅವರ ಜವಾಬ್ದಾರಿ ಬಗ್ಗೆ ತಿಳಿ ಹೇಳುತ್ತಾರೆ. ಅದರ ಹೊರತಾಗಿ ಯಾವುದೇ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ ಎಂದು ಐಸಿಸಿ ಹೇಳಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ತಮ್ಮ ಜವಾಬ್ದಾರಿ ಅರಿತು ಆಡಲಿದ್ದಾರೆ ಎಂಬ ಬಗ್ಗೆ ಐಸಿಸಿ ವಿಶ್ವಾಸ ವ್ಯಕ್ತಪಡಿಸಿದೆ. ಡಿಆರ್ ಎಸ್ ಚೀಟಿಂಗ್ ವಿಚಾರದಲ್ಲಿ ಬಿಸಿಸಿಐ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪರ ನಿಂತಿದೆ. ಉಭಯ ತಂಡಗಳ ಪರ ವಿರೋಧ ಕೆಸರೆರಚಾಟಗಳು ಮುಂದುವರಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ