ಇರ್ಫಾನ್ ಪಠಾಣ್ ಮನೆಯಲ್ಲಿ ಇಮ್ರಾನ್ ಖಾನ್!

ಸೋಮವಾರ, 26 ಡಿಸೆಂಬರ್ 2016 (07:05 IST)
ಬರೋಡಾ:  ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಮನೆಗೆ ಇಮ್ರಾನ್ ಖಾನ್ ಬಂದಿದ್ದಾರೆ. ಇಮ್ರಾನ್ ಖಾನ್ ಎಂದಾಕ್ಷಣ ನಮಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಹೆಸರು ನೆನಪಿಗೆ ಬರುವುದು. ಅವರು ಯಾಕೆ ಇರ್ಫಾನ್ ಮನೆಗೆ ಬಂದರು ಎಂದು ಅಚ್ಚರಿಗೊಳ್ಳಬೇಡಿ.


ಇಮ್ರಾನ್ ಖಾನ್ ಎಂದರೆ ಇರ್ಫಾನ್ ಮತ್ತು ಪತ್ನಿ ಸಫಾ ಬೇಗ್ ಅವರ ಪುತ್ರ. ಕಳೆದ ವಾರವಷ್ಟೇ ಇರ್ಫಾನ್ ಪತ್ನಿ ಸಫಾ ಗಂಡು ಮಗುವಿಗೆ ಜನ್ಮವಿತ್ತಿದ್ದರು. ಈ ಮಗುವಿಗೆ ಅವರು ಇಮ್ರಾನ್ ಖಾನ್ ಪಠಾಣ್ ಎಂದು ಹೆಸರಿಟ್ಟಿದ್ದಾರೆ.

ಇರ್ಫಾನ್ ಅಣ್ಣ ಯೂಸುಫ್ ಪಠಾಣ್ ಕೂಡಾ ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದವರೇ. ಒಟ್ಟಾರೆ ಇದೊಂದು ಕ್ರಿಕೆಟ್ ಕುಟುಂಬ. ಹೀಗಾಗಿ ಹೊಸ ಮಗುವೂ ಕ್ರಿಕೆಟಿಗನಾಗಲಿ ಎಂಬ ಕಾರಣಕ್ಕೆ ಖ್ಯಾತ ಕ್ರಿಕೆಟಿಗನ ಹೆಸರೇ ಇಟ್ಟಿರಬೇಕು. ಅಂತೂ ಸ್ವತಃ ಇರ್ಫಾನ್ ತಮ್ಮ ಮಗುವಿನ ಹೆಸರನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ