ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಹಣಾಹಣಿ

ಗುರುವಾರ, 8 ಅಕ್ಟೋಬರ್ 2015 (10:18 IST)
ಇಂದು ಭಾರತ-ದಕ್ಷಿಣ ಆಫ್ರಿಕಾ ಮಧ್ಯೆ ಅಂತಿನ ಟಿ-20 ಕಾಳಗ ನಡೆಯಲಿದ್ದು, ಆತಿಥೇಯ ಭಾರತಕ್ಕೆ ಕ್ಲೀನ್ ಸ್ವೀಪ್ ಭೀತಿ ಕಾಡುತ್ತಿದೆ.

ಈಗಾಗಲೇ ಸರಣಿಯನ್ನು ಕಳೆದುಕೊಂಡಿರುವ ಧೋನಿ ಪಡೆ ಕ್ರಿಕೆಟ್ ಕಾಶಿ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಮಾನ ಉಳಿಸಿಕೊಳ್ಳುವ ಒತ್ತಡದಲ್ಲಿದ್ದರೆ  ಆಫ್ರಿಕಾ ಪಡೆ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದೆ.
 
ಧರ್ಮಶಾಲಾದಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಉತ್ತಮ ಮೊತ್ತವನ್ನು ಪೇರಿಸಲು ಸಫಲವಾಗಿದ್ದರೂ  ಬೌಲರ್ಸ್‍ಗಳು ದುಬಾರಿಯಾಗಿ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಕಟಕ್‍ನಲ್ಲಿ ಬ್ಯಾಟಿಂಗ್ ಸಂಪೂರ್ಣ ನೆಲಕಚ್ಚಿತ್ತು. ಹೀಗಾಗಿ ಬ್ಯಾಟಿಂಗ್-ಬೌಲಿಂಗ್ ವೈಫಲ್ಯಗಳನ್ನು ಮೆಟ್ಟಿ ನಿಂತು ಧೋನಿ ಪಡೆ ಗೆಲುವಿನತ್ತ ಗಮನ ಹರಿಸಬೇಕಿದೆ. 
 
ಕಟಕ್‌ನಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ಭಾರತ ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿತ್ತು.  ಕ್ರಿಕೆಟ್ ಅಭಿಮಾನಿಗಳು ಬಾಟಲಿ ಎಸೆದು ವಿರೋಧ ವ್ಯಕ್ತ ಪಡಿಸಿದ್ದರು.  ಹೀಗಾಗಿ ಈ ರೀತಿಯ ಘಟನೆ ಮರುಕಳಿಸದಂತೆ ಇಂದು ಮೈದಾನಕ್ಕೆ ಭದ್ರತೆ ನೀಡಲಾಗಿದೆ.
 
ಸತತ ಎರಡು ಗೆಲುವಿನಿಂದ ಬೀಗುತ್ತಿರುವ ಡೂಪ್ಲಿಸಿಸ್ ಪಡೆ ಕ್ಲಿನ್ ಸ್ವೀಪ್ ಮಾಡಲು ರಣತಂತ್ರ ರೂಪಿಸಿದೆ.  ಪ್ರತಿತಂತ್ರದೊಂದಿಗೆ ಭಾರತ ಮಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.

ವೆಬ್ದುನಿಯಾವನ್ನು ಓದಿ