ದಿನೇಶ್ ರಾಮ್ಡಿನ್‌ಗೆ ಕೊಕ್: ವೆಸ್ಟ್ ಇಂಡೀಸ್ ಲೆಜೆಂಡ್‌ಗಳಿಗೆ ನಿರಾಶೆ

ಸೋಮವಾರ, 11 ಜುಲೈ 2016 (13:29 IST)
ದಿನೇಶ್ ರಾಮ್ಡಿನ್ ಅವರಿಗೆ ಭಾರತ ವಿರುದ್ಧ ಮುಂಬರುವ ಟೆಸ್ಟ್ ಸರಣಿಗೆ ಅವಕಾಶ ನೀಡದಿರುವ ಕುರಿತು ವೆಸ್ಟ್ ಇಂಡೀಸ್ ಲೆಜೆಂಡ್‌ಗಳು ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಇತರೆ ವಿಕೆಟ್ ಕೀಪರ್‌ಗಳಿಗೆ ಹೋಲಿಸಿದಾಗ ರಾಮ್ಡಿನ್ ಸರಾಸರಿಗೆ ಸಂಬಂಧಿಸಿದಂತೆ ಆಯ್ಕೆದಾರರು ನೀಡಿದ ವಿವರಣೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ವೆಸ್ಟ್ ಇಂಡೀಸ್ ತಂಡದ ಇಂದಿನ ಪರಿಸ್ಥಿತಿಯಲ್ಲಿ ಅವರನ್ನು ಹೊರಗಿಟ್ಟಿರುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ವಿಕೆಟ್ ಕೀಪರ್ ಜೆಫ್ ಡುಜೋನ್ ಪ್ರತಿಕ್ರಿಯಿಸಿದ್ದಾರೆ.
 
 ವೆಸ್ಟ್ ಇಂಡೀಸ್ ನಾಲ್ಕು ಟೆಸ್ಟ್ ಸರಣಿಗೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ತಮ್ಮ ಬ್ಯಾಟಿಂಗ್ ಸರಾಸರಿ ಕುರಿತು ವೆಸ್ಟ್ ಇಂಡೀಸ್ ನೂತನ ಅಧ್ಯಕ್ಷ ಕರ್ಟ್ನಿ ಬ್ರೌನ್ ಭಾವಿಸಿದ ರೀತಿಯ ಬಗ್ಗೆ ರಾಮ್ಡಿನ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಆದಾಗ್ಯೂ ರಾಮ್ಡಿನ್ ಆಸೀಸ್ ವಿರುದ್ಧ 59 ಮತ್ತು 62 ರನ್ ಸ್ಕೋರ್ ಮಾಡಿದ ತನ್ನ ಕೊನೆಯ ಎರಡು ಇನ್ನಿಂಗ್ಸ್‌ಗಳನ್ನು ಕುರಿತು ಪ್ರಸ್ತಾಪಿಸಿದ್ದಾರೆ.
 
ಇದು ನಿಜವಾಗಿದ್ದರೆ ನನಗೆ ತುಂಬಾ ನಿರಾಶೆಯಾಗುತ್ತದೆ. ಆಯ್ಕೆ ನೀತಿಯಲ್ಲಿ ನಿಜವಾಗಲೂ ಯಾವ ಮಾನದಂಡ ಅನುಸರಿಸುತ್ತಾರೆ ಮತ್ತು ವಿಕೆಟ್ ಕೀಪರ್ ಪ್ರಾಮುಖ್ಯತೆ ಮತ್ತು ಪಾತ್ರ ಕುರಿತು ಅವರ ತಿಳಿವಳಿಕೆ ಬಗ್ಗೆ ಪ್ರಶ್ನೆ ಮೂಡುತ್ತದೆ ಎಂದು ಇನ್ನೊಬ್ಬ ಲೆಜೆಂಡ್ ವಿಕೆಟ್ ಕೀಪರ್ ಡೆರಿಕ್ ಮರ್ರೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ