ಕ್ರಿಕೆಟ್‌‌: ಭಾರತದ ಗೆಲುವಿಗೆ ಟ್ವಿಟರ್‌‌‌ನಲ್ಲಿ ಅಭಿನಂದನೆಗಳ ಮಹಾಪುರ

ಮಂಗಳವಾರ, 22 ಜುಲೈ 2014 (18:02 IST)
ಭಾರತ ಮತ್ತು ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್‌‌‌ ಪಂದ್ಯದಲ್ಲಿ 95 ರನ್‌ನಿಂದ ಭಾರತ ಗೆಲುವನ್ನು ಸಾಧಿಸಿದೆ. ಈ ಕುರಿತು ವಿಶ್ವದೆಲ್ಲಡೆಯಲ್ಲಿ ಕ್ರಿಕೆಟ್‌ ಪಟುಗಳು ಟ್ವಿಟರ್‌‌‌ನಲ್ಲಿ ಭಾರತ ತಂಡಕ್ಕೆ ಹೊಗಳಿಕೆಯ ಸುರಿಮಳೆ ಸುರಿಸುತ್ತಿದ್ದಾರೆ. ಲಾರ್ಡ್ಸ್‌‌ ಕ್ರೀಡಾಂಗಣದಲ್ಲಿ ಟೀಮ್‌ ಇಂಡಿಯಾ ಕಳೆದ 28 ವರ್ಷದ ನಂತರ ಮೊದಲ ಗೆಲುವನ್ನು ಸಾಧಿಸಿದೆ. ಟೆಸ್ಟ್‌‌‌ ಪಂದ್ಯದಲ್ಲಿ ಇಂಗ್ಲೆಂಡ್‌‌ ತಂಡ 319 ರನ್‌ ಗುರಿ ಸಾಧಿಸಲು ಹೊರಟಿತ್ತು ಆದರೆ 223 ರನ್‌‌ಗಳಿಗೆ ಔಟ್‌ ಆಗಿದೆ. 
 
" ಇಂಗ್ಲೆಂಡ್ ತಂಡಕ್ಕೆ ಒಂದು ಗಂಟೆ ಭಯಾನಕವಾಗಿತ್ತು, ಭಾರತ ಒತ್ತಡ ಹೇರಿ ಇಂಗ್ಲೆಂಡ್‌ ತಂಡವನ್ನು ನಿರ್ಗಮಿಸುವಂತೆ ಮಾಡಿದೆ. ಇಂಗ್ಲೆಂಡ್‌ ಹಸಿರು ಪಿಚ್‌ಮೇಲೆ ಟಾಸ್‌ ‌ಗೆದ್ದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ.ತಂಡದಲ್ಲಿ ಬದಲಾವಣೆ ಅಗತ್ಯವಾಗಿದೆ " ಎಂದು ಶೇನ್‌ ವಾರ್ನ್ ಟ್ವಿಟ್‌ ಮಾಡಿದ್ದಾರೆ. 
 
" ಭಾರತಕ್ಕೆ ಅಭಿನಂದನೆಗಳು. ಆಫ್‌‌ ಲಾರ್ಡ್ಸ್‌‌‌ನಲ್ಲಿ ಈ ಗೆಲುವಿನ ಹಕ್ಕುದಾರರಾಗಿದ್ದರು. ನೀವು ಇಂಗ್ಲೆಂಡ್‌‌‌‌ಗೆ ಪೂರ್ಣ ಪ್ರಮಾಣದಿಂದ ಇಂಗ್ಲೆಂಡ್‌ಗಾಗಿ ಸಿದ್ದಪಡಿಸಿದ ಪಿಚ್‌‌ನಲ್ಲಿ ಸೋಲಿಸಿದ್ದಿರಿ" ಎಂದು ಇಂಗ್ಲೆಂಡ್‌‌‌ನ ಮಾಜಿ ನಾಯಕ ಎಲೆಕ್‌ ಸ್ಟಿವರ್ಟ್‌ ತಿಳಿಸಿದ್ದಾರೆ. 
 
" ಬದಲಾವಣೆಯ ಅವಶ್ಯಕತೆ ಇದೆ ಎಂದು ನನಗೆ ಅನಿಸುತ್ತದೆ. ನಮ್ಮ ಬ್ಯಾಟ್ಸ್‌ಮೆನ್‌ ಮತ್ತು ಬೌಲರ್ಸ್‌‌‌‌ಗಳು ಮತ್ತು ತಂಡದ ನಾಯಕರು ಅಷ್ಟೊಂದು ಉತ್ತಮ ಪ್ರದರ್ಶನ ನೀಡಲಿಲ್ಲ" ಎಂದು ಇನ್ನೊಬ್ಬ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್‌ ವಾನ್ ಟ್ವಿಟ್‌ ಮಾಡಿದ್ದಾರೆ. 
 
ಪಂದ್ಯದಲ್ಲಿ ಇಶಾಂತ್ ಶರ್ಮಾ 74 ರನ್‌ ನೀಡಿ ಏಳು ವಿಕೆಟ್‌ ಪಡೆದುಕೊಂಡಿದ್ದಾರೆ ಮತ್ತು ಭಾರತಕ್ಕೆ ಐತಿಹಾಸಿಕ ಗೆಲುವನ್ನು ದೊರಕಿಸಿಕೊಟ್ಟಿದ್ದಾರೆ. ಮಾಜಿ ಭಾರತೀಯ ನಾಯಕ ಬಿಶನ್‌ ಸಿಂಗ್‌‌ ಬೇಡಿ ಈ ಗೆಲುವನ್ನು ಟ್ವಿಟ್‌ ಮಾಡ್ತಾ " ಶಬ್ಬಾಸ್ ಭಾರತ ! ಅಧ್ಬುತ ಪ್ರದರ್ಶನ ನೀಡಿದ ಇಶಾಂತ್. ಇಂಗ್ಲೆಂಡ್ ಜೊತೆಗೆ ಯಾವುದೇ ಸಹಾನೂಭೂತಿ ಇಲ್ಲ. ಇದರಿಂದ ಕೋಚ್‌‌ಗೆ ಹೆಡ್‌ಮಾಸ್ಟರ್ ಅವಶ್ಯಕತೆ ಇಲ್ಲ. ಎಂದು ತಿಳಿಸಿದ್ದಾರೆ. ಕಾಮೆಂಟರ್‌ ಆಗಿ ಇಂಗ್ಲೆಂಡ್‌ಗೆ ತಲುಪಿದ ಮಾಜಿ ಭಾರತೀಯ ಬಾಲರ್‌ ಸಂಜಯ್‌ ಮಾಂಜ್ರೇಕರ್‌‌ " ಇಂಗ್ಲೆಂಡ್‌ ಪ್ರಾರಂಭದಲ್ಲಿಯೇ ಶೀಘ್ರದಲ್ಲಿ ವಿಕೆಟ್‌ ಕಳೆದುಕೊಂಡಿತು. ಆದರೆ ಐದು ದಿನದಲ್ಲಿ ಭಾರತ ಉತ್ತಮ ತಂಡವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ.ಗೆಲುವಿನ ಅರ್ಹವಾಗಿದೆ ಎಂದು" ಟ್ವಿಟ್‌ ಮಾಡಿದ್ದಾರೆ. 
 
" ಶಹಬಾಸ್‌‌ ಟೀಮ್‌ ಇಂಡಿಯಾ , ಅಧ್ಬುತ ಗೆಲುವು.  ಟೆಸ್ಟ್ ಪಂದ್ಯ ಗೆಲುವಿನ ದಡಕ್ಕೆ ಸೇರಿಸುವಲ್ಲಿ ಇಶಾಂತ್ ಸಫಲರಾಗಿದ್ದಾರೆ" ಎಂದು ಜಹೀರ್‌ ಖಾನ್ ಟ್ವಿಟ್‌ ಮಾಡಿದ್ದಾರೆ. " ವಾವ್‌ ಅಧ್ಬುತ್ ಗೆಲುವು. ಮಹೇಂದ್ರ ಸಿಂಗ್‌ ಧೋನಿ ಮತ್ತು ಅವರ ಸಹ ಆಟಗಾರಿಗೆ ಈ ಗೆಲುವಿಗೆ ಅಭಿನಂದನೆಗಳು. ನೀವು ಈಡೀ ದೇಶ ಹೆಮ್ಮೆಯಿಂದ ತಲೆ ಎತ್ತುವಂತೆ ಮಾಡಿದ್ದೀರಾ" ಎಂದು ಮಾಜಿ ಭಾರತೀಯ ಬೌಲರ್‌ ವಿ.ವಿ.ಎಸ್‌ ಲಕ್ಷ್ಮಣ್ ಟ್ವಿಟ್‌ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ