ನಿಧಾನಗತಿಯ ಬೌಲಿಂಗ್: ಕೊಹ್ಲಿಗೆ 12 ಲಕ್ಷ ರೂ. ದಂಡ

ಶನಿವಾರ, 23 ಏಪ್ರಿಲ್ 2016 (13:23 IST)
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಗೆ ಐಪಿಎಲ್ 12 ಲಕ್ಷ ರೂ. ದಂಡವನ್ನು ವಿಧಿಸಿದೆ. ಕೊಹ್ಲಿ ಮತ್ತು ಡಿ ವಿಲಿಯರ್ಸ್ ಬಿರುಸಿನ ಅರ್ಧಶತಕಗಳನ್ನು ಬಾರಿಸಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ 13 ರನ್ ಜಯ ತಂದಿತ್ತಿದ್ದರು.
 
ಕನಿಷ್ಠ ಓವರ್ ರೇಟ್ ದೋಷಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆ ಅಡಿಯಲ್ಲಿ ಆವೃತ್ತಿಯ ಮೊದಲ ಅಪರಾಧವಾದ್ದರಿಂದ ಕೊಹ್ಲಿಗೆ 12 ಲಕ್ಷ ಮಾತ್ರ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತಿಳಿಸಿದೆ. 
 
ಆರ್‌ಸಿಬಿ ಡಿವಿಲಿಯರ್ಸ್ ಅವರ 46 ಎಸೆತದಲ್ಲಿ 83 ಮತ್ತು 63 ಎಸೆತಗಳಲ್ಲಿ 80 ರನ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 185 ರನ್ ಮಾಡಿತ್ತು. ಆರ್‌ಸಿಬಿ ಬೌಲರುಗಳು ಪುಣೆಯನ್ನು 172 ರನ್‌ಗೆ ಮೊಟಕುಗೊಳಿಸಿ ಜಯಗಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ