ಅಹಮ್ಮದಾಬಾದ್: ಟೀಂ ಇಂಡಿಯಾ ವೇಗಿ ಇರ್ಫಾನ್ ಪಠಾಣ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ನಿನ್ನೆಯಷ್ಟೇ ಅವರ ಪತ್ನಿ ಸಫಾ ಬೇಗ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವಿಷಯವನ್ನು ಸ್ವತಃ ಇರ್ಫಾನ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ವರ್ಷಾರಂಭಕ್ಕೆ ಇರ್ಫಾನ್ ಮತ್ತು ಸಫಾ ಬೇಗ್ ರನ್ನು ಮದುವೆಯಾಗಿದ್ದರು. “ಈ ಸಂತೋಷವನ್ನು ವರ್ಣಿಸಲು ಕಷ್ಟ. ಇದರಲ್ಲಿ ಒಂಥರಾ ಖುಷಿಯಿದೆ. ಗಂಡು ಮಗುವಿನ ತಂದೆಯಾಗಿದ್ದೇನೆ” ಎಂದು ಇರ್ಫಾನ್ ಹೇಳಿದ್ದಾರೆ.
ಇರ್ಫಾನ್ ಬರೋಡಾ ರಣಜಿ ತಂಡದ ನಾಯಕರಾಗಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ ತಂಡ ರಣಜಿ ನಾಕೌಟ್ ಹಂತಕ್ಕೇರಲು ವಿಫಲವಾಗಿತ್ತು. ಅವರೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ