ಪತ್ನಿಯ ಫೋಟೋ ಇರ್ಫಾನ್ ಪಠಾಣ್ ಗೆ ತಂತು ಕುತ್ತು

ಬುಧವಾರ, 19 ಜುಲೈ 2017 (09:38 IST)
ನವದೆಹಲಿ: ಮುಸ್ಲಿಂ ಧರ್ಮಕ್ಕೆ ಸೇರಿದ ಭಾರತೀಯ ಕ್ರಿಕೆಟಿಗರು ಇತ್ತೀಚೆಗೆ ಸ್ವಯಂ ಘೋಷಿತ ಧರ್ಮ ರಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಹೊಸದೇನಲ್ಲ. ಲೇಟೆಸ್ಟ್ ಸೇರ್ಪಡೆ ವೇಗಿ ಇರ್ಫಾನ್ ಪಠಾಣ್.


ಪತ್ನಿ ಸಫಾ ಬೇಗ್ ಜತೆ ಕಾರಿನಲ್ಲಿ ಕುಳಿತುಕೊಂಡು ಒಂದು ಸೆಲ್ಫೀ ತೆಗೆದುಕೊಂಡ ಇರ್ಫಾನ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದೇ ತಪ್ಪಾಯಿತು. ಆ ಫೋಟೋ ನೋಡಿ ಇದೀಗ ಸಂಪ್ರದಾಯವಾದಿಗಳು ಕಿಡಿ ಕಾರಿದ್ದಾರೆ.

ಈ ಫೋಟೋದಲ್ಲಿ ಇರ್ಫಾನ್ ತಮ್ಮ ಪತ್ನಿಯ ಮುಖವನ್ನು ಜಗತ್ತಿಗೇ ತೋರಿಸಿದ್ದು, ಅಲ್ಲದೆ, ಪತ್ನಿಯ ಕೈಗೆ ನೈಲ್ ಪಾಲಿಶ್ ಹಾಕಿಕೊಂಡಿರುವುದು ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಸಂಪ್ರದಾಯವಾದಿಗಳು ಕಿಡಿ ಕಾರಿದ್ದಾರೆ. ಹೀಗೇ ಪತ್ನಿ ಜತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ವೇಗಿ ಮೊಹಮ್ಮದ್ ಶಮಿ ಕೂಡಾ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ..  ಭಾರತವನ್ನು ವಿಲನ್ ಮಾಡಲು ಸರ್ವ ಪ್ರಯತ್ನ ನಡೆಸುತ್ತಿರುವ ಚೀನಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ