ಇಶಾಂತ್ ಶರ್ಮಾ ಕೋತಿ ಮುಖದ ಚಾಲೆಂಜ್ ಈಗ ಭಾರೀ ಹಿಟ್!

ಗುರುವಾರ, 9 ಮಾರ್ಚ್ 2017 (09:57 IST)
ಬೆಂಗಳೂರು: ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಎಷ್ಟು ವಿಕೆಟ್ ಕಿತ್ತರು ಎನ್ನುವುದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಅದಕ್ಕಿಂತಲೂ ಹೆಚ್ಚು ಅವರಿಗೆ ಇಷ್ಟವಾಗಿದ್ದು, ಇಶಾಂತ್ ಶರ್ಮಾ ಕೋತಿ ಥರಾ ಮುಖ ಮಾಡಿ ಅಣಕಿಸಿದ್ದು.

 
ಅದೀಗ ಇಂಟರ್ನೆಟ್ ನಲ್ಲಿ #ಇಶಾಂತ್ ಗೇಮ್ ಫೇಸ್ ಚಾಲೆಂಜ್ ಎಂದೇ ಜನಪ್ರಿಯವಾಗಿದೆ. ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಶಾಂತ್ ಆಸೀಸ್ ನಾಯಕ ಸ್ಟೀವ್ ಸ್ಮಿತ್ ರನ್ನು ಕೋತಿಯ ಹಾಗೆ ಮುಖ ಮಾಡಿ ಅಣಕ ಮಾಡಿದ್ದರು. ಅದು ಭಾರೀ ವೈರಲ್ ಆಗಿತ್ತು.

ಆದರೆ ಅದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಶಾಂತ್ ಥರಾ ಮುಖ ಮಾಡುವ ಚಾಲೆಂಜ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಕಾಮೆಂಟೇಟರ್ ಮಯಾಂತಿ ಲ್ಯಾಂಗರ್ ಸೇರಿದಂತೆ ಅನೇಕ ಕಮೆಂಟೇಟರ್ ಗಳು, ಅಭಿಮಾನಿಗಳು ಇಶಾಂತ್ ರಂತೆ ಮುಖ ಮಾಡಿ ಫೋಟೋ ಪ್ರಕಟಿಸುತ್ತಿದ್ದಾರೆ. ನೀವೂ ಮಾಡಿ ನೋಡಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ