ಭಾರತದ ವಿರುದ್ಧ ಜೇಮ್ಸ್ ಆಂಡರ್ಸನ್ ಆಡಲ್ಲ

ಗುರುವಾರ, 20 ಅಕ್ಟೋಬರ್ 2016 (13:28 IST)
ಲಂಡನ್: ಭಾರತದ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಆಡುವುದಿಲ್ಲ.

ಭಾರತದಲ್ಲಿ ನಡೆಯಲಿರುವ ಸರಣಿಯ ಮೊದಲ ಪಂದ್ಯಕ್ಕೆ ಅವರು ಪೂರ್ಣ ಪ್ರಮಾಣದಲ್ಲಿ ಪಿಟ್ ಆಗಿಲ್ಲದೇ ಇರುವುದು ಇಂಗ್ಲೆಂಡ್ ಗೆ ಆಘಾತ ನೀಡಲಿದೆ. ಪ್ರತೀ ಬಾರಿ ಉಭಯ ತಂಡಗಳು ಎದುರಾದಾಗ ಭಾರತದ ಬ್ಯಾಟ್ಸ್ ಮನ್ ಗಳು ಆಂಡರ್ಸನ್ ವಿರುದ್ಧ ಆಡಲು ತಿಣುಕಾಡುತ್ತಾರೆ.

ಹೀಗಾಗಿ ಭಾರತಕ್ಕೆ ಇದು ಶುಭ ಸುದ್ಧಿಯೇ. ಈಗಾಗಲೇ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲೂ ಅವರು ಭುಜದ ಗಾಯದ ಸಮಸ್ಯೆಯಿಂದಾಗಿ ಆಡುತ್ತಿಲ್ಲ. ನವಂಬರ್ 9 ರಂದು ರಾಜ್ ಕೋಟ್ ನಲ್ಲ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಅವರು ಗುಣಮುಖರಾಗಲಾರರು ಎಂದು ಇಂಗ್ಲೆಂಡ್ ನಾಯಕ ಅಲಸ್ಟರ್ ಕುಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ