ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಯಶಸ್ವಿ ಬೌಲರ್ ಆಗಲು ವೈವಿದ್ಯತೆ ಬೇಕೆಂದ ಜಸ್ಪ್ರೀತ್ ಬುಮ್ರಾ

ಶನಿವಾರ, 5 ನವೆಂಬರ್ 2016 (12:37 IST)
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ನಲ್ಲಿ ಯಶಸ್ವಿಯಾಗಬೇಕೆಂದರೆ, ಯಾರ್ಕರ್ ಒಂದೇ ಸಾಲದು, ವೈವಿದ್ಯತೆ ಬೇಕೆಂದು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.

ಕೊನೆಯ ಓವರ್ ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡುವ ಬುಮ್ರಾ ಯಾರ್ಕರ್  ಬೌಲಿಂಗ್ ನ ಸ್ಪೆಷಲಿಸ್ಟ್ ಎಂದೇ ಗುರುತಿಸಿದ್ದಾರೆ. “ಎಲ್ಲಾ ಎಸೆತಗಳನ್ನು ಯಾರ್ಕರ್ ಮಾಡಲಾಗದು. ವೈವಿದ್ಯತೆ ಬೇಕು. ಅಭ್ಯಾಸ ಮಾಡುವಾಗಲೂ ವೈವಿದ್ಯಮಯ ಎಸೆತಗಳನ್ನು ಎಸೆಯಲು ಪ್ರಯತ್ನಿಸುತ್ತೆನೆ” ಎಂದು ಗುಜರಾತ್ ಪರ ರಣಜಿ ಪಂದ್ಯ ಆಡುತ್ತಿರುವ ಬುಮ್ರಾ ಹೇಳಿದ್ದಾರೆ.

ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವಾಗ ಯಶಸ್ವಿಯಾಗಿ ಯಾರ್ಕರ್ ಬಾಲ್ ಎಸೆಯಲು ಕಲಿತಿದ್ದ ಬುಮ್ರಾ ಅದರಲ್ಲೇ ಪರಿಣಿತರಾಗಿದ್ದರು. 22 ವರ್ಷದ ಯುವ ಬೌಲರ್ ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳಲ್ಲಿ ಎಂಎಸ್ ಧೋನಿಯ ಮೆಚ್ಚಿನ ಬೌಲರ್ ಆಗಿದ್ದಾರೆ. ಕೊನೆಯ ಓವರ್ ಗಳಲ್ಲಿ ಚೆನ್ನಾಗಿ ಯಾರ್ಕರ್ ಎಸೆದು ರನ್ ನಿಯಂತ್ರಣ ಮಾಡುವುದಲ್ಲದೆ, ವಿಕೆಟ್ ಕೀಳುವ ಕಾರಣಕ್ಕೆ ಸೀಮಿತ ಓವರ್ ಗಳಲ್ಲಿ ಅವರಿಗೆ ಸ್ಥಾನ ಲಭಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ