ಜಯಂತ್ ಯಾದವ್ ಬೌಲಿಂಗ್ ಟೆಸ್ಟ್ ಕ್ರಿಕೆಟ್ ಗೆ ಸೂಕ್ತವಲ್ಲ ಎಂದ ಈರಪಳ್ಳಿ ಪ್ರಸನ್ನ

ಶುಕ್ರವಾರ, 30 ಡಿಸೆಂಬರ್ 2016 (08:12 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಪಂದ್ಯದಿಂದಲೇ ಜಯಂತ್ ಯಾದವ್ ಸದ್ದು ಮಾಡಿರಬಹುದು. ಅವರು ಭಾರತಕ್ಕೆ ಸಿಕ್ಕಿದ ಮತ್ತೊಬ್ಬ ಪ್ರತಿಭಾವಂತ ಸ್ಪಿನ್ ಬೌಲರ್ ಎಂದು ಎಲ್ಲರೂ ಹೊಗಳುತ್ತಿರಬಹುದು. ಆದರೆ ಮಾಜಿ ಸ್ಪಿನ್ ದಿಗ್ಗಜ ಈರಪಳ್ಳಿ ಪ್ರಸನ್ನ ಮಾತ್ರ ಅದನ್ನು ಒಪ್ಪಲು ತಯಾರಿಲ್ಲ.

ಅವರ ಪ್ರಕಾರ, ಜಯಂತ್ ಟೆಸ್ಟ್ ಕ್ರಿಕೆಟ್ ಗೆ ತಕ್ಕುದಾದ ಸ್ಪಿನ್ ಬೌಲರ್ ಅಲ್ಲವಂತೆ. “ನನ್ನ ಪ್ರಕಾರ, ಜಯಂತ್ ಗೆ ಸುದೀರ್ಘ ಸ್ಪೆಲ್ ಬೌಲಿಂಗ್ ಮಾಡುವ ಸಾಮರ್ಥ್ಯವಿಲ್ಲ. ಅವರು ಏಕದಿನ ಅಥವಾ ಟಿ-ಟ್ವೆಂಟಿ ಕಿರು ಮಾದರಿಗೆ ಸೂಕ್ತವಾದ ಆಲ್ ರೌಂಡರ್” ಎಂದು ಹಿರಿಯ ಸ್ಪಿನ್ ಬೌಲರ್ ಅಭಿಪ್ರಾಯಪಟ್ಟಿದ್ದಾರೆ.

ಅವರ ಪ್ರಕಾರ ಪ್ರಸಕ್ತ ರವಿಚಂದ್ರನ್ ಅಶ್ವಿನ್ ವಿಶ್ವದ ಶ್ರೇಷ್ಠ ಸ್ಪಿನ್ನರ್. ರವೀಂದ್ರ ಜಡೇಜಾ ಮತ್ತು ಅಶ್ವಿನ್ ಟೀಂ ಇಂಡಿಯಾಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. ಇಬ್ಬರೂ ಶ್ರೇಷ್ಠ ಬೌಲರ್ ಗಳು. ಅಶ್ವಿನ್ ಬೌಲಿಂಗ್ ನಲ್ಲಿ ಮುನ್ನಗ್ಗಿ ಬಾರಿಸುವುದೆಲ್ಲಾ ಅಷ್ಟು ಸುಲಭವಲ್ಲ ಎನ್ನುವುದು ಪ್ರಸನ್ನ ಅಭಿಮತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ