ಜೋಯ್ ರೂಟ್‌ಗೆ ಇಂಗ್ಲೆಂಡ್ ಕ್ರಿಕೆಟ್ ಹ್ಯಾಟ್ರಿಕ್ ಪ್ರಶಸ್ತಿಗಳು

ಮಂಗಳವಾರ, 17 ಮೇ 2016 (18:52 IST)
ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಾರ್ಷಿಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಜೋಯ್ ರೂಟ್ ಅವರು ಪ್ರಶಸ್ತಿಗಳ ಹ್ಯಾಟ್ರಿಕ್‌ಗೆ ಪಾತ್ರರಾಗಿದ್ದಾರೆ. ಅವರನ್ನು  ವರ್ಷದ ಟೆಸ್ಟ್ ಆಟಗಾರ, ವರ್ಷದ ಸೀಮಿತ ಓವರುಗಳ ಆಟಗಾರ ಮತ್ತು ವರ್ಷದ ಅಭಿಮಾನಿಗಳ ಆಟಗಾರ ಪ್ರಶಸ್ತಿಗಳಿಂದ ಪುರಸ್ಕರಿಸಲಾಯಿತು.

ಟೆಸ್ಟ್ ಪ್ರಶಸ್ತಿಗೆ ಸ್ಟುವರ್ಟ್ ಬ್ರಾಡ್ ಮತ್ತು ಬೆನ್ ಸ್ಟೋಕ್ಸ್ ಕಠಿಣ ಸ್ಪರ್ಧೆಯನ್ನು ಯಾರ್ಕ್ ಶೈರ್ ಬ್ಯಾಟ್ಸ್‌ಮನ್ ಎದುರಿಸಿದ್ದರು. ಸೀಮಿತ ಓವರುಗಳ ವಿಭಾಗದಲ್ಲಿ ಡೇವಿಡ್ ವಿಲ್ಲಿ ಮತ್ತು ಜೋಯ್ ಬಟ್ಲರ್ ಅವರಿಗೆ ಸಮೀಪದಲ್ಲಿದ್ದರು. ಮಾಧ್ಯಮ ಸಮೀಕ್ಷೆಯು ಈ ಎರಡೂ ಪ್ರಶಸ್ತಿಗಳ ಫಲಿತಾಂಶ ಪ್ರಕಟಿಸಿದೆ.
 
25 ವರ್ಷದ ಆಟಗಾರ ಇತ್ತೀಚೆಗೆ ಮುಗಿದ ವಿಶ್ವ ಟಿ 20ಯಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದ್ದು, ಅವರ ತಂಡ ರನ್ನರ್ಸ್ ಅಪ್‌ನಲ್ಲಿ ಮುಕ್ತಾಯ ಕಂಡಿದೆ. ಕಳೆದ ವರ್ಷದ ಆಷಸ್ ಗೆಲುವಿನಲ್ಲಿ ಎರಡು ಶತಕಗಳನ್ನು ಸಿಡಿಸಿ ಟೆಸ್ಟ್‌ನಲ್ಲಿ ಕೂಡ ಉತ್ತಮ ಸಾಧನೆ ಮಾಡಿದ್ದಾರೆ.
 
 ಸಾಮರ್‌ಸೆಟ್‌ನ ಅನ್ಯಾ ಶ್ರುಬ್‌ಸೋಲ್ ವರ್ಷದ ಮಹಿಳಾ ಆಟಗಾರ್ತಿಯಾಗಿ ಆಯ್ಕೆಯಾದರು. ಹಿರಿಯ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳ ಪ್ರಶಸ್ತಿಗೆ ಪಾತ್ರರಾದರು.  ಮಾಜಿ ಇಂಗ್ಲೆಂಡ್ ಕೋಚ್ ಆಗಿ ಕಾಮೆಂಟೇಟರ್‌ಗೆ ಪರಿವರ್ತನೆಯಾದ ಡೇವಿಡ್ ಲಾಯ್ಡ್ ಅವರಿಗೆ ವಿಶೇಷ ಸಾಧನೆ ಪ್ರಶಸ್ತಿ ನೀಡಲಾಯಿತು. 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ