ಭಾರತಕ್ಕೆ ಬರಲು ಕ್ರಿಕೆಟಿಗ ಜೋ ರೂಟ್ ಗೆ ಇನ್ನೂ ಗೆಳತಿಯ ಗ್ರೀನ್ ಸಿಗ್ನಲ್ ಸಿಕ್ಕಿಲ್ವಂತೆ!

ಸೋಮವಾರ, 9 ಜನವರಿ 2017 (10:53 IST)
ಮುಂಬೈ: ಭಾರತ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಬ್ರೆಬೋರ್ನ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ಆದರೆ ಗೆಳತಿಯ ಹಸಿರು ನಿಶಾನೆ ಸಿಗದೆ ಪ್ರಮುಖ ಬ್ಯಾಟ್ಸ್ ಮನ್ ಜೋ ರೂಟ್ ಇನ್ನೂ ಭಾರತಕ್ಕೆ ಬರಲು ಸಾಧ್ಯವಾಗಿಲ್ಲ.

ಮುಂಬೈ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಆಟಗಾರರೆಲ್ಲರೂ, ಕ್ರಿಸ್ ಮಸ್ ರಜಾ ಮಜಾ ಮುಗಿಸಿ ಬೆವರಳಿಸುತ್ತಿದ್ದರೆ, ರೂಟ್ ಮಾತ್ರ ಇನ್ನೂ ಪತ್ನಿಯ ಜತೆಯಲ್ಲಿ ಹಾಯಾಗಿ ತಮ್ಮ ದೇಶದಲ್ಲೇ ಇದ್ದಾರೆ. ಕಾರಣ, ರೂಟ್ ಗೆಳತಿ ಮೊದಲ ಮಗುವಿಗೆ ಜನ್ಮ ನೀಡಲಿದ್ದು, ಆ ಸಂದರ್ಭದಲ್ಲಿ ಆಕಾಶವೇ ತಲೆ ಮೇಲೆ ಬಿದ್ದರೂ, ಆಕೆಯನ್ನು ಬಿಟ್ಟು ಬರೋಲ್ಲ ಎಂದು ಅವರು ಪ್ರತಿಜ್ಞೆ ಮಾಡಿಕೊಂಡಿದ್ದರಂತೆ.

ಹೀಗಾಗಿ ರೂಟ್ ತಂಡದೊಂದಿಗೆ ಭಾರತಕ್ಕೆ ಬಂದಿಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲೂ ಆಡುತ್ತಿಲ್ಲ. ಆದರೆ ಮುಂದಿನ ಅಭ್ಯಾಸ ಪಂದ್ಯದ ವೇಳೆ ಅವರ ಕೌಟುಂಬಿಕ ಸಮಸ್ಯೆಗಳೆಲ್ಲಾ ತೀರಿ ಮೈದಾನಕ್ಕೆ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಇಂಗ್ಲೆಂಡ್ ತಂಡವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ