ಈ ಕೇರಳ ಕ್ರಿಕೆಟಿಗನಿಗೆ ಕಾದಿತ್ತು ಗ್ರಹಚಾರ

ಶುಕ್ರವಾರ, 2 ಡಿಸೆಂಬರ್ 2016 (10:58 IST)
ಕೊಚ್ಚಿ: ಈ ಕೇರಳ ಕ್ರಿಕೆಟಿಗನಿಗೆ ಅದೇನಾಗಿತ್ತೋ ಇದ್ದಕ್ಕಿದ್ದಂತೆ ತಂಡದಿಂದ ನಾಪತ್ತೆಯಾದರು. ಸಾಲದೆಂಬಂತೆ ಪಂದ್ಯ ಮುಗಿದ ಮೇಲೆ ಸಿಟ್ಟಿನಲ್ಲಿ ಬ್ಯಾಟ್ ಮುರಿದರು. ಪರಿಣಾಮ ಈಗ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಶೋಕಾಸ್ ನೋಟೀಸ್ ಪಡೆದಿದ್ದಾರೆ.

ಟೀಂ ಇಂಡಿಯಾ ಪರ ಟಿ-ಟ್ವೆಂಟಿ ತಂಡವನ್ನು ಪ್ರತಿನಿಧಿಸಿದ್ದ ಸಂಜು ಸ್ಯಾಮ್ಸನ್ ಈ ತಪ್ಪು ಮಾಡಿದ ಕ್ರಿಕೆಟಿಗ. 22 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೇರಳ ಪರ ರಣಜಿ ಪಂದ್ಯವಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅಲ್ಲದೆ ಒಂದು ಬ್ಯಾಟ್ ಮುರಿದು ಹಾಕಿದ್ದರು. ತಂಡದ ವ್ಯವಸ್ಥಾಪಕರು ಹಲಾವರು ಬಾರಿ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಲಿಲ್ಲ.

ಸದ್ಯ ಕಳಪೆ ಫಾರ್ಮ್ ನಲ್ಲಿರುವ ಕ್ರಿಕೆಟಿಗನ ಈ ದುರ್ವರ್ತನೆ ಸಾಲದೆಂಬಂತೆ ಅವರ ತಂದೆ ಸ್ಯಾಮ್ಸನ್ ಕೆಸಿಎ ಅಧ್ಯಕ್ಷ ಟಿ.ಎಸ್.ಮ್ಯಾಥ್ಯೂಸ್ ಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದರು ಎನ್ನಲಾಗಿದೆ. ಆದರೆ ಸ್ಯಾಮ್ಸನ್ ಈ ಆರೋಪಗಳನ್ನು ನಿರಾಕರಿಸಿದ್ದು, ನನ್ನ ಮಗ ನಿರಪರಾಧಿ ಎಂದಿದ್ದಾರೆ. ಏನೇ ಆಗಲಿ ಸಂಜು ಇದೀಗ ಕೆಸಿಎ ನಿಯೋಜಿಸಿದ ನಾಲ್ಕು ಮಂದಿ ಸದಸ್ಯರ ತನಿಖಾ ಸಮಿತಿಯ ಎದುರು ಹಾಜರಾಗಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ