ಕೆಎಲ್ ರಾಹುಲ್ ಅದೃಷ್ಟ ಬದಲಿಸಿದ್ದ ಸಿಡ್ನಿ

ಭಾನುವಾರ, 22 ನವೆಂಬರ್ 2020 (09:06 IST)
ಸಿಡ್ನಿ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಆಸ್ಟ್ರೇಲಿಯಾದಲ್ಲಿ ಆಡುವುದು ಎಂದರೆ ವಿಶೇಷವೇ. ಯಾಕೆಂದರೆ 2014 ರಲ್ಲಿ ಇದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂಗಣದಲ್ಲಿ ರಾಹುಲ್ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಿದ್ದರು. ಇಂದು ಮತ್ತೆ ರಾಹುಲ್ ಟೆಸ್ಟ್ ತಂಡಕ್ಕೆ ವಾಪಸಾತಿ ಮಾಡಲು ಅದೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ವೇದಿಕೆ ಮಾಡಿಕೊಂಡಿದ್ದಾರೆ.


ಕಳಪೆ ಫಾರ್ಮ್ ನಿಂದಾಗಿ ಟೆಸ್ಟ್ ತಂಡದಿಂದ ಹೊರಬಿದ್ದಿದ್ದ ರಾಹುಲ್ ಗೆ ಈಗ ಟೆಸ್ಟ್ ತಂಡಕ್ಕೆ ಮರಳುವ ಅದೃಷ್ಟ ಸಿಕ್ಕಿದೆ. ಇದುವರೆಗೆ ಅವರು 36 ಟೆಸ್ಟ್ ಆಡಿದ್ದು ಐದು ಶತಕ ಸಿಡಿಸಿದ್ದಾರೆ. ಅಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಅವರು ಪದಾರ್ಪಣೆ ಮಾಡಿದ್ದರೂ ಆ ಟೆಸ್ಟ್ ಪಂದ್ಯದಲ್ಲಿ ವಿಫಲರಾಗಿದ್ದರು. ಆದರೆ ಮುಂದಿನ ಸಿಡ್ನಿ ಪಂದ್ಯದಲ್ಲಿ ರಾಹುಲ್ ಗೆ ಮೆಚ್ಚಿನ ಆರಂಭಿಕನ ಸ್ಥಾನ ಸಿಕ್ಕಿತ್ತು. ಆ ಪಂದ್ಯದಲ್ಲಿ ರಾಹುಲ್ ತಾಳ್ಮೆಯ ಆಟವಾಡಿ 110 ರನ್ ಸಿಡಿಸಿದ್ದರು. ಇದು ಅವರ ವೃತ್ತಿಬದುಕನ್ನೇ ಬದಲಿಸಿತು. ಟೆಸ್ಟ್ ತಂಡದಲ್ಲಿ ಅವರಿಗೊಂದು ಸ್ಥಾನ ಸಿಕ್ಕಿತು. ರಾಹುಲ್ ದ್ರಾವಿಡ್ ಗೆ ಪರ್ಯಾಯ ಬ್ಯಾಟ್ಸ್ ಮನ್ ಎನ್ನುವ ಬಿರುದು ಕಟ್ಟಿಕೊಂಡರು.

ಇಂದು ಮತ್ತೆ ರಾಹುಲ್ ತಮ್ಮ ಟೆಸ್ಟ್ ತಂಡದ ಖಾಯಂ ಸ್ಥಾನಕ್ಕಾಗಿ ಅದೇ ಆಸ್ಟ್ರೇಲಿಯಾವನ್ನು ವೇದಿಕೆ ಮಾಡಿದ್ದಾರೆ. ಇಲ್ಲಿ ಅವರು ಮಿಂಚಿದರೆ ಮತ್ತೆ ಟೆಸ್ಟ್ ತಂಡದ ಖಾಯಂ ಸದಸ್ಯರಾಗುವುದರಲ್ಲಿ ಅನುಮಾನವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ